Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

‘ಇದು ಕ್ರಾಸ್ ಬ್ರೀಡ್’; ಆ್ಯಕ್ಷನ್​ ಮೂಲಕ ‘ಲೈಗರ್’ ಟ್ರೇಲರ್​ನಲ್ಲಿ ಮಿಂಚಿದ ವಿಜಯ್ ದೇವರಕೊಂಡ | Vijay Devarakonda and Ananya Panday Starrer Liger Movie Trailer In Mass Action

liger-1.jpg


ವಿಜಯ್ ದೇವರಕೊಂಡ ಅವರು ರೊಮ್ಯಾಂಟಿಕ್ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಆದರೆ, ‘ಲೈಗರ್’ ಚಿತ್ರದಲ್ಲಿ ಅವರು ಬೇರೆಯದೇ ಅವತಾರ ತಾಳಿದ್ದಾರೆ.

ವಿಜಯ್ ದೇವರಕೊಂಡ ನಟನೆಯ ‘ಲೈಗರ್​’ ಸಿನಿಮಾದ (Liger Movie) ಟ್ರೇಲರ್​ ಇಂದು (ಜುಲೈ 21) ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ (Vijay Devarakonda) ಅವರು ಸಖತ್ ಮಾಸ್ ಅವತಾರ ತಾಳಿದ್ದಾರೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬ ಝಲಕ್ ಸಿಕ್ಕಿದೆ. ವಿಜಯ್ ದೇವರಕೊಂಡ ಅವರ ಮೇಕೋವರ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ, ರಿಲೀಸ್ ಆಗಿರುವ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಾಣುತ್ತಿದೆ. ಆಗಸ್ಟ್​ 25ರಂದು ‘ಲೈಗರ್’ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ವಿಜಯ್ ದೇವರಕೊಂಡ ಅವರು ರೊಮ್ಯಾಂಟಿಕ್ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಆದರೆ, ‘ಲೈಗರ್’ ಚಿತ್ರದಲ್ಲಿ ಅವರು ಬೇರೆಯದೇ ಅವತಾರ ತಾಳಿದ್ದಾರೆ. ಅವರ ಮಾಸ್ ಅವತಾರ, ಸಿಕ್ಸ್ ಪ್ಯಾಕ್ ಬಾಡಿ, ಆ್ಯಕ್ಷನ್ ದೃಶ್ಯಗಳು ಟ್ರೇಲರ್​ನಲ್ಲಿ ಹೈಲೈಟ್ ಆಗಿದೆ. ಈ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು, ಕನ್ನಡ, ಮಲಯಾಳಂ ಹಾಗೂ ತಮಿಳು ಟ್ರೇಲರ್ ಬೆಳಗ್ಗೆ 9.30ಕ್ಕೆ ರಿಲೀಸ್ ಆಗಿದ್ದು, ಹಿಂದಿ ಟ್ರೇಲರ್ ಸಂಜೆ ಲಾಂಚ್ ಆಗಲಿದೆ.

ಅನನ್ಯಾ ಪಾಂಡೆ ಅವರು ‘ಲೈಗರ್’ ಚಿತ್ರಕ್ಕೆ ನಾಯಕಿ. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಸಿಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ಅವರು ಟ್ರೇಲರ್​ನ ಅಂತ್ಯದಲ್ಲಿ ಬರುತ್ತಾರೆ. ಅವರ ಪಾತ್ರ ಏನು ಎಂಬುದು ಪೂರ್ತಿಯಾಗಿ ರಿವೀಲ್ ಆಗಿಲ್ಲ. ರಮ್ಯಾ ಕೃಷ್ಣ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಟ್ರೇಲರ್ ಲಾಂಚ್​​ಗೆ ಪ್ರಭಾಸ್ ಅತಿಥಿ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ



ಇಡೀ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಚಿತ್ರಕ್ಕೆ ಪುರಿ ಜಗನಾಥ್ ಅವರು ನಿರ್ದೇಶನ ಮಾಡಿದ್ದಾರೆ. ಅಜೀಮ್ ದಯಾನಿ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ‘ಅಕ್ಡಿ ಪಕ್ಡಿ..’ ಹಾಡು ಗಮನ ಸೆಳೆದಿದೆ. ಈಗ ಟ್ರೇಲರ್ ಮೂಲಕ ಚಿತ್ರದ ಮೈಲೇಜ್ ಹೆಚ್ಚಿಸಲಾಗಿದೆ. ಕರಣ್ ಜೋಹರ್, ಪುರಿ ಜಗನಾಥ್ ಮೊದಲಾದವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,591,112
Recovered
0
Deaths
528,655
Last updated: 46 seconds ago