Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

KGF Chapter 2: ಟಿವಿಯಲ್ಲಿ ಬರೋಕೆ ರೆಡಿ ಆಯ್ತು ‘ಕೆಜಿಎಫ್ 2’; ಹೊಸ ಅಪ್ಡೇಟ್ ನೀಡಿದ ಜೀ ಕನ್ನಡ | Zee Kannada Announced KGF Chapter 2 will premier very soon

kgf-chapter-2.jpg


‘ಕೆಜಿಎಫ್ 2’ ಚಿತ್ರವನ್ನು ಸಾಕಷ್ಟು ಮಂದಿ ಥಿಯೇಟರ್​ನಲ್ಲಿ ಕಣ್ತುಂಬಿಕೊಂಡರು. ನಂತರ ಒಟಿಟಿಯಲ್ಲಿ ರಿಲೀಸ್ ಆದಾಗಲೂ ಸಿನಿಮಾ ನೋಡಿ ಖುಷಿಪಟ್ಟರು. ಈಗ ಸಿನಿಮಾ ಟಿವಿಯಲ್ಲಿ ಬರುತ್ತಿದೆ.

‘ಕೆಜಿಎಫ್ 2’ ಸಿನಿಮಾ (KGF: Chapter 2) ಮಾಡಿದ ಮೋಡಿ ತುಂಬಾನೇ ದೊಡ್ಡದು. ಈ ಚಿತ್ರ ಬಾಲಿವುಡ್ ಮಂದಿಯೂ ತಿರುಗಿ ನೋಡುವಂತೆ ಮಾಡಿದೆ. ಈ ಚಿತ್ರದಿಂದ ಯಶ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಏಪ್ರಿಲ್ 14ರಂದು ಥಿಯೇಟರ್​ನಲ್ಲಿ ರಿಲೀಸ್ ಆದ ‘ಕೆಜಿಎಫ್ 2’ ಚಿತ್ರ ನಂತರ ಒಟಿಟಿಗೆ ಕಾಲಿಟ್ಟಿತು. ಈಗ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲು ರೆಡಿ ಆಗಿದೆ. ಈ ಬಗ್ಗೆ ವಾಹಿನಿಯಿಂದ ಅಧಿಕೃತ ಘೋಷಣೆ ಆಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಅದರ ಮುಂದುವರಿದ ಭಾಗವಾಗಿ ತೆರೆಗೆ ಬಂದ ‘ಕೆಜಿಎಫ್ 2’ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಪ್ರಶಾಂತ್ ನೀಲ್ ಸಾಮರ್ಥ್ಯ ಏನು ಎಂಬುದು ಇಡೀ ಜಗತ್ತಿಗೆ ಮತ್ತೊಮ್ಮೆ ಮನವರಿಕೆ ಆಯಿತು. ಈ ಚಿತ್ರದಿಂದ ಕನ್ನಡ ಚಿತ್ರರಂಗದ ಹಿರಿಮೆ ಮತ್ತಷ್ಟು ಹೆಚ್ಚಿತು. ಬಾಕ್ಸ್ ಆಫೀಸ್​ನಲ್ಲಿ 1250 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದ್ದು ಈ ಚಿತ್ರದ ಹೆಚ್ಚುಗಾರಿಕೆ.

‘ಕೆಜಿಎಫ್ 2’ ಚಿತ್ರವನ್ನು ಸಾಕಷ್ಟು ಮಂದಿ ಥಿಯೇಟರ್​ನಲ್ಲಿ ಕಣ್ತುಂಬಿಕೊಂಡರು. ನಂತರ ಒಟಿಟಿಯಲ್ಲಿ ರಿಲೀಸ್ ಆದಾಗಲೂ ಸಿನಿಮಾ ನೋಡಿ ಖುಷಿಪಟ್ಟರು. ಈಗ ಸಿನಿಮಾ ಟಿವಿಯಲ್ಲಿ ಬರುತ್ತಿದೆ. ಇದಕ್ಕಾಗಿ ಸಾಕಷ್ಟು ಮಂದಿ ಕಾದಿದ್ದರು. ಅಂತೂ ಆ ದಿನ ಬಂದಿದೆ. ಈ ಬಗ್ಗೆ ಪ್ರೋಮೋ ಹಂಚಿಕೊಂಡಿರುವ ಜೀ ಕನ್ನಡ ವಾಹಿನಿ, ‘ಪ್ರಪಂಚದಲ್ಲಿರೋ ಬಂಗಾರನೆಲ್ಲ ಅಮ್ಮನಿಗೆ ತಂದುಕೊಡೋ ಧೀರ ಸುಲ್ತಾನ ನಿಮ್ಮನೆ ಪರದೆಯಲ್ಲೂ ಬರ್ತಿದ್ದಾನೆ. ಕೆಜಿಎಫ್ ಚಾಪ್ಟರ್-2 ಅತಿ ಶೀಘ್ರದಲ್ಲಿ’ ಎಂದು ಕ್ಯಾಪ್ಶನ್ ನೀಡಿದೆ.

ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತದೆ. ‘ಕೆಜಿಎಫ್ 2’ ಕೂಡ ಮುಂಬರುವ ವಿಶೇಷ ದಿನಗಳಲ್ಲಿ ಸಣ್ಣ ಪರದೆಗೆ ಅಪ್ಪಳಿಸಬಹುದು ಎನ್ನಲಾಗುತ್ತಿದೆ. ಆ ದಿನಾಂಕ ಆದಷ್ಟು ಬೇಗ ಘೋಷಣೆ ಆಗಲಿ ಎಂದು ವೀಕ್ಷಕರು ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್ 2’ ನೋಡಿ ಬದಲಾಗಿದೆ ಬಾಲಿವುಡ್ ಪ್ರೇಕ್ಷಕರ ಮನಸ್ಥಿತಿ? ಆಮಿರ್ ಖಾನ್​ಗೆ ಶುರುವಾಗಿದೆ ಭಯ

ಇದನ್ನೂ ಓದಿ‘ಕೆಜಿಎಫ್ 2’ ಚಿತ್ರದಲ್ಲಿ ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಪ್ರಮುಖ ವಿಲನ್ ಪಾತ್ರ ಮಾಡಿದ್ದಾರೆ. ರವೀನಾ ಟಂಡನ್ ಪ್ರಧಾನಿ ರಮಿಕಾ ಸೇನ್ ಆಗಿ ಕಾಣಿಸಿಕೊಂಡಿದ್ದಾರೆ.  ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್​ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಪ್ರಶಾಂತ್ ನೀಲ್ ನಿರ್ದೇಶನ ಇರುವ ಈ ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ ಇದೆ.

ತಾಜಾ ಸುದ್ದಿ

Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
0
Recovered
0
Deaths
0
Last updated: 6 minutes ago