Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

CWG 2022: ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ; ಹರ್ಮನ್ಪ್ರೀತ್ ಕೌರ್​ಗೆ ನಾಯಕತ್ವ | Senior Women squad for Birmingham 2022 Commonwealth Games announced

indian-women-cricket-team.jpg


CWG 2022: ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ; ಹರ್ಮನ್ಪ್ರೀತ್ ಕೌರ್​ಗೆ ನಾಯಕತ್ವ

ಭಾರತೀಯ ಮಹಿಳಾ ಕ್ರಿಕೆಟ್ ತಂಡ

CWG 2022: ಬಿಸಿಸಿಐ ಕೂಡ ಕಾಮನ್‌ವೆಲ್ತ್ ಗೇಮ್ಸ್​ಗೆ ತನ್ನ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ 15 ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದ್ದು, ತಂಡದ ನಾಯಕತ್ವವನ್ನು ಹರ್ಮನ್ಪ್ರೀತ್ ಕೌರ್​ಗೆ ವಹಿಸಲಾಗಿದೆ.

ಬರ್ಮಿಂಗ್ ಹ್ಯಾಮ್​ನಲ್ಲಿ ನಡೆಯಲಿರುವ ಕಾಮನ್​ವೆಲ್ತ್ ಕ್ರೀಡಾಕೂಟಕ್ಕೆ (Commonwealth Games) ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಸೋಮವಾರ, ಜುಲೈ 11 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕ್ರೀಡಾಕೂಟಕ್ಕೆ 15 ಸದಸ್ಯರ ತಂಡವನ್ನು ಘೋಷಿಸಿತು. ತಂಡದ ನಾಯಕತ್ವವನ್ನು ಸ್ಟಾರ್ ಆಲ್‌ರೌಂಡರ್ ಹರ್ಮನ್‌ಪ್ರೀತ್ ಕೌರ್ ವಹಿಸಲಿದ್ದಾರೆ. ಜುಲೈ 27 ರಿಂದ ಪ್ರಾರಂಭವಾಗುವ ಆಟಗಳಲ್ಲಿ 24 ವರ್ಷಗಳ ನಂತರ ಕ್ರಿಕೆಟ್ ಮರಳುತ್ತಿದ್ದು, ಮಹಿಳಾ ಕ್ರಿಕೆಟ್ ಅನ್ನು ಇದರಲ್ಲಿ ಮೊದಲ ಬಾರಿಗೆ ಸೇರಿಸಲಾಗಿದೆ. ಭಾರತವಲ್ಲದೆ, ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಆತಿಥೇಯ ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಸೇರಿದಂತೆ ಕೆಲವು ದೊಡ್ಡ ತಂಡಗಳು ಟಿ20 ಮಾದರಿಯಲ್ಲಿ ಪಂದ್ಯಗಳಲ್ಲಿ ಭಾಗವಹಿಸುತ್ತಿವೆ.

ಭಾರತ ಮಹಿಳಾ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ಎಸ್ ಮೇಘನಾ, ತಾನಿಯಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್‌ವಾಡ್, ಮೇಘನಾ ಸಿಂಗ್, ರೇಣುಕಾ ಸಿಂಗ್, ರಾಧಾ ಯಾದವ್, ಹರ್ಲೀನ್ ಡಿಯೋಲ್ ಮತ್ತು ಸ್ನೇಹ ರಾಣಾ.

ಸ್ಟ್ಯಾಂಡ್‌ಬೈ – ಸಿಮ್ರಾನ್ ದಿಲ್ ಬಹದ್ದೂರ್, ರಿಚಾ ಘೋಷ್, ಪೂನಂ ಯಾದವ್

ಇದನ್ನೂ ಓದಿ



ಕ್ರಿಕೆಟ್ ತಂಡದ ಜೊತೆಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಬಾರಿ ಭಾರತದ 215 ಆಟಗಾರರ ತಂಡ ಭಾಗವಹಿಸುತ್ತಿದೆ. ಈ 215 ಆಟಗಾರರಲ್ಲಿ 108 ಪುರುಷರು ಮತ್ತು 107 ಮಹಿಳೆಯರು ಸೇರಿದ್ದಾರೆ. ಜ್ಯುವೆಲಿನ್ ಥ್ರೋವರ್ ನೀರಜ್ ಚೋಪ್ರಾ, ಕುಸ್ತಿಪಟು ಬಜರಂಗ್ ಪೂನಿಯಾ, ಬಾಕ್ಸರ್ ನಿಖತ್ ಜರೀನ್ ಅವರಂತಹ ಸ್ಟಾರ್ ಆಟಗಾರರನ್ನು ಈ ಬಾರಿ ನೋಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತದೆ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 7 ಪದಕಗಳನ್ನು ಗೆದ್ದುಕೊಂಡಿತ್ತು, ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೇ ಗುರಿಯೊಂದಿಗೆ ಭಾರತ ಕಾಮನ್​ವೆಲ್ತ್ ಪ್ರವೇಶಿಸಲಿದೆ. ಭಾರತ ಹಲವು ಕ್ರೀಡೆಗಳಲ್ಲಿ ತಮ್ಮ ಆಟಗಾರರನ್ನು ಕಣಕ್ಕಿಳಿಸಲಿದೆ.

ತಾಜಾ ಸುದ್ದಿ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 9 minutes ago