Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Autobiography: ಆಧುನಿಕ ಶಕುಂತಲಾ ಕಥನ: ವಿದ್ಯಾರ್ಥಿಯ ಪ್ರತಿಭೆ ಅರಳುವಲ್ಲಿ ಶಿಕ್ಷಕರದ್ದೇ ನಿರ್ಣಾಯಕ ಪಾತ್ರ | A teacher plays a crucial role in developing the talent of a student adhunika shakuntala kathana autobiography column of scientist dr shakuntala sridhara

New-Project-2022-07-10T142811.840.jpg


ನಾವೆಲ್ಲರೂ ನಮ್ಮ ಜೀವನದ ವಿವಿಧ ಹಂತಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿ ಜೀವನದಲ್ಲಿ ಮತ್ತು ಅದಕ್ಕೂ ಮೊದಲು ಬಾಲ್ಯದಲ್ಲಿ ಅನುಭವಿಸಿದ ಸಂಗತಿಗಳಿಂದ ರೂಪಿಸಲ್ಪಟ್ಟಿದ್ದೇವೆ.

ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)

(ಕಥನ 8)

ನಾವೆಲ್ಲರೂ ನಮ್ಮ ಜೀವನದ ವಿವಿಧ ಹಂತಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿ ಜೀವನದಲ್ಲಿ ಮತ್ತು ಅದಕ್ಕೂ ಮೊದಲು ಬಾಲ್ಯದಲ್ಲಿ ಅನುಭವಿಸಿದ ಸಂಗತಿಗಳಿಂದ ರೂಪಿಸಲ್ಪಟ್ಟಿದ್ದೇವೆ. ಈ ಅನುಭವಗಳು ನಮ್ಮ ಜೀವನದಲ್ಲಿ ನಡೆದ ಘಟನೆಗಳ, ಸನ್ನಿವೇಶಗಳ, ನಾವು ಓದುವ ಪುಸ್ತಕಗಳ, ಪೋಷಕರ ಮತ್ತು ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ಎಂದು ನಾವು ನೆನಪಿಸಿಕೊಳ್ಳಬೇಕಾದ ಶಿಕ್ಷಕರ ಮಾರ್ಗದರ್ಶನದ ಮೆಳಾಯಿಸಿಕೊಂಡಿರುತ್ತವೆ.

ಮೆದುಳು ಬ್ಲಾಟಿಂಗ್ ಪೇಪರ್‌ನಂತಿದ್ದು ಈ ಎಲ್ಲಾ ಅನಿಸಿಕೆಗಳನ್ನು ಹೀರಿಕೊಳ್ಳುತ್ತದೆ. ಬೆಳವಣಿಗೆಯ ಸಮಯದಲ್ಲಿ ಅದಕ್ಕೆ ಜ್ಞಾನ, ಕಲೆಗಳ ಬಗ್ಗೆ ತಿಳಿವಳಿಕೆ,ಒಳ್ಳೆ ನಡವಳಿಕೆ, ಕುತೂಹಲ, ಭಾಷೆಯ ಮೇಲೆ ಹಿಡಿತ, ಪರಿಸರ ಜ್ಞಾನ ಇವೆಲ್ಲವನ್ನೂ ಒದಗಿಸಬೇಕಾದದ್ದು ಪೋಷಕರ ಮತ್ತು ಶಿಕ್ಷಕರ ಕರ್ತವ್ಯ.

ಮಗುವಿನಲ್ಲಡಗಿರುವ ಅಂತರ್ಗತ ಪ್ರತಿಭೆಯನ್ನು ಪತ್ತೆಹಚ್ಚಲು ಮತ್ತು ಆ ಮಗುವನ್ನು ಉತ್ತಮ ಭವಿಷ್ಯದ ಕಡೆಗೆ ಮಾರ್ಗದರ್ಶನ ಮಾಡಲು ತಮ್ಮ ಕೈಲಾದದಷ್ಟು ಪ್ರಯತ್ನ ಮಾಡುವ ಶಿಕ್ಷಕರ ಪಾತ್ರ ಮತ್ತು ಸ್ವಭಾವವು ಒಬ್ಬ ವಿದ್ಯಾರ್ಥಿಯ ಪ್ರತಿಭೆ ಅರಳಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನನ್ನ ಕಾಲದ ಹೆಚ್ಚಿನ ಶಿಕ್ಷಕರು ಮತ್ತು ನಂತರದ ಕೆಲವು ತಲೆಮಾರುಗಳು ಅಂತಹ ಶಿಕ್ಷಕರನ್ನು ಪಡೆದಿದ್ದ ಅದೃಷ್ಟವಂತರು.

ಇಂತಹ ಜ್ಞಾನದ ವಿತರಕರು, ಮಾ ರ್ಗದರ್ಶಕರು ಕೇವಲ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ಶಿಕ್ಷಣ. ಮುಗಿದ ನಂತರವೂ ನಮ್ಮ ಜೀವನದುದ್ದಕ್ಕೂ ಕಂಡುಬರುತ್ತಾರೆ.

ಅವರು ನಮ್ಮ ಉದ್ಯೋಗದ ಆರಂಭಿಕ ವರ್ಷಗಳಲ್ಲಿ, ನಂತರ ವೃತ್ತಿಜೀವನದಲ್ಲಿ ಉನ್ನತಿಯ ಕಡೆಗೆ ದಾರಿದೀಪಗಳಾಗುತ್ತಾರೆ. ಕೆಲವರು ನಮಗೆ ಬಹಿರಂಗವಾಗಿ ಮಾರ್ಗದರ್ಶನ ನೀಡುತ್ತಾರೆ ಮತ್ತು ಇತರರು ನಮಗೆ ತಿಳಿಯದೆ ನಮಗೆ ಸಹಾಯ ಮಾಡುತ್ತಾರೆ. ಮನುಷ್ಯರಲ್ಲಿ ಮಾತ್ರ ಇಂತಹ ಪರೋಪಕಾರಿ ಗುಣಗಳನ್ನು ಕಾಣಲು ಸಾಧ್ಯ.

ಇಂತಹ ಪ್ರತಿಭಾನ್ವೇಷಣೆ ಅಮೆರಿಕಾದ ಕೆಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪ್ರಮುಖ ಗುರಿಯಾಗಿದೆ. ಉತ್ತಮ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಸಕಲ ಸೌಲಭ್ಯಗಳನ್ನೂ ನೀಡುತ್ತವೆ. ಇದು ಸಂಪೂರ್ಣವಾಗಿ ಸ್ವಾರ್ಥರಹಿತವಲ್ಲ.ಆದರೆ ವಿದ್ಯಾರ್ಥಿಗೆ ಮತ್ತು ಸಂಸ್ಥೆಗೆ ಪರಸ್ಪರ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ

ಇದನ್ನು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಜಾನ್ ನ್ಯಾಶ್ ಅವರು ತಮ್ಮ ಆತ್ಮಚರಿತ್ರೆ ಎ ಬ್ಯೂಟಿಫುಲ್ ಮೈಂಡ್‌ನಲ್ಲಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಸಂಕ್ಷಿಪ್ತವಾಗಿ ಅಮೇರಿಕದಲ್ಲಿರುವ ಹಾರ್ವರ್ಡ್, ಪ್ರಿನ್ಸ್‌ಟನ್, ಸ್ಟ್ಯಾನ್‌ಫೋರ್ಡ್, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ. ಇತ್ಯಾದಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಆ ಕಾಲೇಜುಗಳ ಡೀನ್‌ಗಳ ಮೂಲಕ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರಕಾಶಮಾನವಾದ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟಿರುತ್ತವೆ.

ಈ ಡೀನ್‌ಗಳು ಕೆಲವು ಅಸಾಧಾರಣ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿದರೆ, ಅಂತಹ ವಿದ್ಯಾರ್ಥಿಗಳಿಗೆ ಎಲ್ಲಾ ಮಾರ್ಗದರ್ಶನವನ್ನು ನೀಡಲಾಗುತ್ತದೆ ಮತ್ತು ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತಾರೆ .

ಒಮ್ಮೆ ಅರ್ಹ ವಿದ್ಯಾರ್ಥಿಗಳು ಈ ಪ್ರೋತ್ಸಾಹದಿಂದ ಹೊರಹೊಮ್ಮಿದರೆ, ನಂತರ ಈ ಉನ್ನತ ವಿಶ್ವವಿದ್ಯಾನಿಲಯಗಳು ತಮ್ಮ ಸಂಸ್ಥೆಗಳಲ್ಲಿ ಅವರನ್ನು ದಾಖಲಿಸಲು ಪ್ರಲೋಭನೆಗಳನ್ನು ಸಾಮಾನ್ಯವಾಗಿ ಉಚಿತ, ವಿದ್ಯಾರ್ತಿ ವೇತನಗಳನ್ನ ನೀಡುತ್ತವೆ ಕೆಲವು ವಿಶ್ವವಿದ್ಯಾನಿಲಯಗಳು ಇದನ್ನು ಮೀರಿ ಡಾರ್ಮಿಟರಿ ಅಥವಾ ಹಾಸ್ಟೆಲ್ ಸೌಲಭ್ಯಗಳನ್ನು ನೀಡುತ್ತವೆ.

ಇದನ್ನೂ ಓದಿ

ಒಮ್ಮೆ ಈ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆದರೆ, ಅಂತಹ ಪ್ರತಿಭಾವಂತ ವಿಫ್ಯಾರ್ಥಿಗಳನ್ನು ವಜ್ರವನ್ನು polish ಮಾಡಿದಂತೆ ವಿದ್ಯಯಲ್ಲಿ ಅಸಾಮಾನ್ಯ ಸಾಧಕರಾಗುವಂತೆ ರೂಪಿಸುತ್ತದೆ. ದೇಶಾದ್ಯಂತ ಕೆಲವು ವಿಶ್ವವಿದ್ಯಾನಿಲಯಗಳ ನಡುವೆ ಈ ಬಗೆಯ ಸಾಧಕರನ್ನು ಸೃಷ್ಟಿಸಲು ಸ್ಪರ್ಧೆಯು ತೀವ್ರವಾಗಿರುತ್ತದೆ.

ಇದರಿಂದ ಹೊರಹೊಮ್ಮುವವರು ಅಸಾಮಾನ್ಯ ವಿಜ್ಞಾನಿಗಳು, ನೀತಿ ನಿರೂಪಕರು, ಅರ್ಥಶಾಸ್ತ್ರಜ್ಞರೂ ಆಗಿರುತ್ತಾರೆ. ಹೆಚ್ಚಿನ ನೊಬೆಲ್ ಪ್ರಶಸ್ತಿಗಳು ಈ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಗೆ ಸಂದಿವೆ, ಸಲ್ಲುತ್ತಿವೆ.”A BEAUTIFUL MIND” ಓದಿದ ನಂತರ, ಭಾರತದಲ್ಲಿ ಅಂತಹ ಪದ್ದತಿಗಳೇನೂ ಇಲ್ಲ ಎಂದು ನನಗೆ ನಿರಾಶೆ ಯಾಯಿತು.

ಶಾಲೆಯಲ್ಲಿ ಮತ್ತು ಪದವಿಪೂರ್ವ ಅವಧಿಯಲ್ಲಿ ನಾನು ಓದಿದ ಪುಸ್ತಕಗಳಿಂದ ಬೆಲೆಬಾಳದ ಪಾಠಗಳನ್ನ ಕಲಿತೆ. ಅವುಗಳಲ್ಲಿ ಕೆಲವು ಜೀವನಚರಿತ್ರೆಗಳು, ಕಾಲ್ಪನಿಕ ಕಥೆಗಳು, ಜನಪ್ರಿಯವಾದ ಕಾದಂಬರಿಗಳುಇದ್ದವು. ಈ ರೀತಿ ಪಠ್ಯೇತರ ಪುಸ್ತಕಗಳನ್ನು ತುಂಬಾ ಓಡುತ್ತಿದ್ದ ಕಾರಣ ಶಾಲೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸುತ್ತಿದ್ದೇನೆ ಎಂದು ಪತ್ತೆ ಮಾಡಿದ ನನ್ನ ತಾಯಿಯಿಂದ ಅವುಗಳನ್ನುಮುಚ್ಚಿಟ್ಟು ಓದಬೇಕಾಗಿತ್ತು.

ಮುದ್ರಿತ ಪದಗಳ ಅದಮ್ಯ ಆಕರ್ಷಣೆ ಇಂದಿಗೂ ನನಗೆ ಕಡಿಮೆಯಾಗಿಲ್ಲ. ವಿಜ್ಞಾನಿಗಳು, ಐತಿಹಾಸಿಕ ಮತ್ತು ರಾಜಕೀಯ ನಾಯಕರು, ತತ್ವಜ್ಞಾನಿಗಳು, ಕ್ರೀಡಾಪಟುಗಳ ಜೀವನ ಚರಿತ್ರೆಗಳು ನನಗೆ ತುಂಬಾ ಆಕರ್ಷಣಿಯ. ಈ ಚಟದಿಂದ ಅನೇಕ ಬಾರಿ ಶಾಲೆಯ ಅಧ್ಯಯನವನ್ನು ನಿರ್ಲಕ್ಷಿಸಿದ್ದೇನೆ.

ಒಂದೇ ಪುಸ್ತಕವನ್ನು ಮತ್ತೆ ಮತ್ತೆ ಓದುವ ಅಭ್ಯಾಸ ನನ್ನದು. ಇನ್ನೊಂದು ಅಭ್ಯಾಸವೆಂದರೆ ವಿಭಿನ್ನ ಲೇಖಕರಿಂದ ಬರೆದ ಒಬ್ಬ ವ್ಯಕ್ತಿಯ ಜೀವನಚರಿತ್ರೆಯನ್ನ ಓದುವುದು. ಇದರಿಂದ ನಾನು ವಿವಿದ ಅಭಿಪ್ರಾಯಗಳನ್ನು ಹೋಲಿಸಿ ನನ್ನದೇ ಆದ ತೀರ್ಮಾನಕ್ಕೆ ಬರುತ್ತಿದ್ದೆ. ಮಹಾನ್ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳು, ಎದುರಿಸಿದ ತೊಡರುಗಳು, ಅವುಗಳನ್ನ ಮೆಟ್ಟಿನಿಂತ ರೀತಿ, ಅವರ ಅಭ್ಯಾಸಗಳು,ಸ್ಫೂರ್ತಿಗಳು, ಮೌಲ್ಯಗಳು, ಸಿದ್ಧಾಂತಗಳು ನನಗೆ ಆದರ್ಶ ಪ್ರಾಯವಾದ ವು. ನಾನು ಮಧ್ಯಮ ಶಾಲೆಯನ್ನು ಮುಗಿಸುವ ಹೊತ್ತಿಗೆ (ಆಗ 8 ನೇ ತರಗತಿಯವರೆಗೆ) ಕನ್ನಡದ ಬಹುತೇಕ ಎಲ್ಲಾ ಜನಪ್ರಿಯ ಕಾದಂಬರಿಗಳನ್ನು ಓದಿ ಮುಗಿಸಿದ್ದೆ.

ಪದವಿಯನ್ನು ಪೂರ್ಣಗೊಳಿಸುವ ಹೊತ್ತಿಗೆ ಹೆಚ್ಚು ಜನಪ್ರಿಯವಾದಇಂಗ್ಲಿಷ್ ಭಾಷೆಯ ಆಯ್ದ ಕ್ಲಾಸಿಕ್‌ಗಳನ್ನು (ಕಾದಂಬರಿಗಳು) ಓದಿದ್ದೆ. ಇದರೊಟ್ಟಿಗೆ ಇಂಗ್ಲೀಶ್ ದಿನಪತ್ರಿಕೆಗಳನ್ನ ಪಠ್ಯಪುಸ್ತಕಗಳಂತೆ ಡಿಕ್ಷನರಿಗಳ ಸಹಾಯದಿಂದ ಓದಿ ಜೀರ್ಣಸಿ ಕೊಳ್ಳಲು ಯತ್ನಿಸುತಿದ್ದೆ.

ಆಗ ಓದಿನ ಹುಚ್ಚಿಗೆ ಬಿದ್ದು ಓದಿದ ಪುಸ್ತಕಗಳು ನನ್ನ ನಡತೆಯನ್ನು ರೂಪಿಸಿದವು, ಏನಾದರೂ ಸಾಧಿಸಬೇಕೆಂಬ ಕಿಡಿ ಹತ್ತಿಸಿದವು, ಕಷ್ಟಗಳನ್ನ ಎದುರಿಸುವ ದ್ಯರ್ಯವನ್ನು ಕಲಿಸಿದವು, ಸಹಿಷ್ನತೆ, ತಾಳ್ಮೆಗಳ ಅವಶ್ಯಕತೆಗಳನ್ನು ಮನಗಾಣಿಸಿದವು.ಜೊತೆಗೆ ಭಾಷೆಯನ್ನು ಉತ್ತಮಗೊ ಳಿಸಿದವು.

1963 ರ ಆರಂಭದಲ್ಲಿ ನನ್ನ ತಂದೆ ಬೆಂಗಳೂರಿಗೆ ಮತ್ತೆ ವರ್ಗಾವಣೆಯಾದರು. ನಾನು ಮನೆಯಿಂದ ಸುಮಾರು 5 ಕಿಮೀ ದೂರದಲ್ಲಿರುವ ಮಲ್ಲೇಶ್ವರಂ ಬಾಲಕಿಯರ ಪ್ರೌಢಶಾಲೆಗೆ ಸೇರಿಕೊಂಡೆ. ತುಂಭಾ ಆಶ್ಚರ್ಯಕರವಾದ ರೀತಿಯಲ್ಲಿ ನನ್ನ ಪ್ರಾಣ ಸ್ನೇಹಿತೆ ಇಂದ್ರಾಣಿ ಯೊಂದಿಗೆ ಮತ್ತೇ ಸೇರಿಕೊಂಡೆ.

ನಾವಿಬ್ಬರೂ ಹಾಸನದಲ್ಲಿ ಹೈಸ್ಕೂಲಿನ ಮೊದಲೆರಡು ವರ್ಷ ಓದಿದ್ದೆವು. ನಮ್ಮ ಮನೆಗಳು ಹತ್ತಿರವಿದ್ದು ಇಬ್ಬರೂ ಒಟ್ಟಿಗೆ ಶಾಲೆಗೆ ಹೋಗುತಿದ್ದುದ್ದಲ್ಲದೆ, ಶಾಲೆಯ ನಂತರ ಕತ್ತಲಾಗುವವರೆ ಗೂ ಹರಟೆ ಹೊಡೆಯುತ್ತಿದ್ದೆವು. ಅವಳು ಕಾರಾಂನಂತ ರಗಳಿಂದ 1962 ರಲ್ಲೇ ಬೆಂಗಳೂರಿಗೆ ಬಂದುಬಿಟ್ಟಿದ್ದಳು.

ಮರು ವರ್ಷ್ ನಾನು ಬೆಂಗಳೂರಿಗೆ ಬಂದೆ ಮತ್ತು ಮಲ್ಲೇಶ್ವರದ ಸರ್ಕಾರಿ ಬಾಲಕಿಯರ ಶಾಲೆಗೆ ಸೇರಿದಾಗ, ಆಶ್ಚರ್ಯಕರವಾದ ರೀತಿಯಲ್ಲಿ ಬೆಟ್ಟಿಯಾದವು. ಇನ್ನೂ ಆಶ್ಚರ್ಯಕರವಾದ ರೀತಿಯಲ್ಲಿ ನಮ್ಮ ಮನೆಗಳು ಹತ್ತಿರವಿದ್ದವು, ಅವಳ ಮನೆ ವ್ಯಾಲಿ ಕಾವಲ್, ನನ್ನದು ಅದಕ್ಕoಟಿ ದಂತೆ ಪ್ಯಾಲಸ್ ಗುಟ್ಟಾಹಳ್ಳಿಯಲ್ಲಿ, ಕೇವಲ 10 ನಿಮಿಷದ ನಡಿಗೆ.

ಗೆಳೆತನ B Sc, ಯವರೆಗೆ ಮುಂದುವರಿಯಿತ. ಅದೇ ಹಾಸನದ ಅಭ್ಯಾಸದಂತೆ ಜೊತೆ ಜೊತೆಯಾಗಿ ಶಾಲೆಗೆ ನಡೆದೆವು. ನಾನು ನಮ್ಮ ಮನೆಯಿಂದು ಹೊರಟು ಅವರ ಮನೆಗೆ ಹೋಗಿ, ಅಲ್ಲಿಂದ ಮಲ್ಲೇಶ್ವರದ ಹನ್ನೊಂದನೇ ಕ್ರಾಸ್ನಲ್ಲಿ ಒಂದು ಕಿಲೋಮೀಟರುಗಿಂತ ಹೆಚ್ಚು ನಡೆದು ಬಲಗಡೆ ತಿರುಗಿದರೆ ನಮ್ಮಶಾಲೆ. ಆ ಹಳೆ ಕಾಲದ ಕಟ್ಟಡ ನೋಡಿ ನನಗೆ ದಿಗ್ಬ್ರಮೆಯಾಯಿತು.ಕಟ್ಟಡ ಭೌತಿಕ ನೋಟವು ವಿಶಿಷ್ಟವಾಗಿತ್ತು.

ಹೊರ ನೋಟಕ್ಕೆ ಶಾಲೆಯ ಯಾವ ಲಕ್ಷಣಗಳೂ ನನಗೆ ಅದರಲ್ಲಿ ಕಾಣಲಿಲ್ಲ.ಅದುಮೈಸೂರು ರಾಜಮನೆತನಕ್ಕೆ ಸೇರಿದ ಹಿಂದಿನ ಅರಮನೆಯಾಗಿತ್ತು. ತರಗತಿ ಕೊಠಡಿಗಳು ತರಗತಿಯಂತೆಯೇ ಅನಿಸಲಿಲ್ಲ ಆದರೆ ಶಾಲೆಯ ಸುತ್ತಲೂ ತೆರೆದ ಮೈದಾನವು ವಿಶಾಲವಾಗಿತ್ತು.

ಈ ಘಟ್ಟದಲ್ಲಿ ಹೇಳಲೇಬೇಕಾದ , ನಮ್ಮೆಲ್ಲರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದ ಘಟನೆ ಭಾರತದ ಮೇಲೆ ಚೀನಾದ ಆಕ್ರಮಣ. ನಾವು ಬೆಂಗಳೂರಿಗೆ ಬರುವ ಸುಮಾರು ಆರು ತಿಂಗಳು ಮೊದಲೇ , 1962 ರ ಅಕ್ಟೋಬರ್ ತಿಂಗಳಿನಲ್ಲಿ ಚೀನಾ ಏಕಾಏಕಿ ಭಾರತದ ಮೇಲೆ ಆಕ್ರಮಣ ಮಾಡಿತು.

ಎಲ್ಲಾ kade ದುಃಖ , ಕೋಪ , ನಿರಾಶೆ, ಭಯ , ಕಾಣಿಸಿತು. ಅದರೊಂದಿಗೆ ದೇಶಭಿಮಾನ ಉಕ್ಕಿ ಹರಿಯಿತು. ಸರ್ದಾರ್ ಪಟೇಲರು ದೇಶವನ್ನು ಒಕ್ಕುಡಿಸಿದರೂ ಇನ್ನೂ ನಾವೆಲ್ಲಾ ಒಂದೇ ಭಾರತ ದೇಶಿಯರು ಎಂಬ ಭಾವ ಇನ್ನೂ ಪೂರ್ತಿ ಆತ್ಮದ ಆಳಕ್ಕೆ ಇಳಿದಿ ರಲಿಲ್ಲ . ಆದರೆ ದೇಶದ ಮೇಲೆ ಪರಕೀಯರ ದಾಳಿ ಆದಾಗ ಆ ಘಟನೆ ಇಡೀ ದೇಶವನ್ನೇ ಒಂದುಗೂಡಿಸಿತು .

ನೆಹರು ದೇಶದ ರಕ್ಷಣೆಗಾಗಿ ಧನ ಸಂಗ್ರಹಕ್ಕೆ ಕರೆ ಕೊಟ್ಟಾಗ ಬಡವ ಬಲ್ಲಿದ ಅನ್ನದೆ ಹಣದ , ಚಿನ್ನದ ಹೊಳೆ ಹರಿದು ಬಂತು. ಲತಾ ಮಾಂಗೇಶ್ ಕರ್ ಏಹ್ ಮೇರೇ ವತನ್ ಕೆ ಲೋಗೋ ・ಹಾಡಿದಾಗ ನೆಹರು ಜೊತೆಗೆ ಇಡೀ ದೇಶವೇ ಕಣ್ಣೀರು ಸುರಿಸಿತು.

ದೇಶಭಿಮಾನವೇ ಬೇರೆ .ಆದರೇಶಭಿಮಾನವೇ bere.ಆದರೆ ಯುದ್ಧದಿಂದ ಜನಜೀವನದ ಮೇಲೆ ಬಿದ್ದ ಕಷ್ಟಕಾರ್ಪನ್ಯಗಳೇ ಬೇರೆ. ಉಲ್ಬಣ ಗೊಂಡ ಆರ್ಥಿಕ ದುಸ್ಥಿತಿ , ಆಹಾರ ಧಾನ್ಯಗಳ ಕೊರತೆ , ಶ್ರೀಮಂತರನ್ನು ಬಿಟ್ಟರೆ ಸಮಾಜದ ಎಲ್ಲಾ ಸ್ಥರಗಳಿಗೆ ಡೈನಂದಿನ ಬಾಳು ಕಷ್ಟವಾಗತೊಡಗಿದ್ದು ಒಂದು ಕರಾಳ ಸ್ವಪ್ನವಾಯಿತು .

.ಅಮೇರಿಕದಿಂದ ಹಡಗುಗಟ್ಟಲೆ ಗೋಧಿ , ಸಕ್ಕರೆ , ಹಾಲಿನ ಪುಡಿ ಬಂದವು . ನಮ್ಮ ಮನೆಯ ಮಟ್ಟಿಗೆ ಹೇಳುವುದಾದರೆ ದೊಡ್ಡ ಹೊಡೆತ ಬಿದ್ದಿದ್ದು ಅಕ್ಕಿಯ ಕೊರತೆ. ಅಂಗಡಿಗಳಲ್ಲಿ ಅಕ್ಕಿ ದೊರಕುತ್ತಿರಲಿಲ್ಲ . ರೇಷನ್ ಅಂಗಡಿ ಜಾರಿಗೆ ಬಂದು ಪ್ರತಿ ಮನೆಗೂ ಅಳತೆ ಪ್ರಕಾರ ವಿತರಿಸ ಲಾಗುತ್ತಿತ್ತು . ಅದು ನಮಗೆ ಸಾಕಾಗುತ್ತಿರಲಿಲ್ಲ . ಮನೆಯಲ್ಲಿ ಗೋದಿಯ ಅಭ್ಯಾಸವಿಲ್ಲ .

ಚಪಾತಿ ಸೇರುತ್ತಲೆ ಇರಲಿಲ್ಲ . ರಾಗಿ ಮುದ್ದೆ ತರ ಮಾಡಲು ಹೋದರೆ ಅದು ಮುದ್ದೆ ಥರ ಆಗುತ್ತಿರಲಿಲ್ಲ. ಅಮ್ಮ ಎಂದಿನಂತಯೇ ಬುದ್ದಿ ಉಪಯೋಗಿಸಿ ಇತರ ಮಧ್ಯಮ ವರ್ಗದ ಗೃಹಿಣಿಯರಂತೆ ಗೋಧಿಯನ್ನ ಮಿಲ್ಲಿಗೆ ಕೊಟ್ಟು ರವೆ ಮಾಡಿಸಲಾರಾಂಭಿಸಿದಳು. ರವೆಯೊಂದಿಗೆ ಬoದ ತೌಡಿನಲ್ಲಿ ಹಲ್ವಾ ಮಾಡಲು ಕಲಿತಳು . ಉಪ್ಪಿಟ್ಟು ನಮ್ಮ ಮನೆಗೆ ಕಾಲಿಟ್ಟಿದ್ದೆ ಈ ಸಮಯದಲ್ಲೇ.

ಹಾಸನದಲ್ಲಿ ನಮ್ಮ ಪ್ರೌಢಶಾಲೆಯಲ್ಲಿ ಕೇವಲ ಎರಡು ವಿಭಾಗಗಳನ್ನು ಹೊಂದಿದ್ದೇವು – ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ ತಲಾ ಒಂದು. ಆದರೆ ಮಲ್ಲೇಶ್ವರಂ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಗೆ ನಾನು ಸೇರಿದಾಗ ನಾಲ್ಕು ವಿಭಾಗಗಳಿದ್ದವು- ಒಂದು ಇಂಗ್ಲಿಷ್ ಮಾಧ್ಯಮದ್ದು ಇನ್ನು ಮೂರು ಕನ್ನಡ ಮೀಡಿ ಯಂ.ವಿದ್ಯಾರ್ಥಿಗಳ ಸಂಖ್ಯೆ ತುಂಬಾ ದೊಡ್ಡದಾಗಿತ್ತು. ಶಿಕ್ಷಕರಿಗೆ ಅತಿಯಾದ ಕೆಲಸ. ವೈಯಕ್ತಿಕ ಗಮನ ಕನಿಷ್ಠವಾಗಿತ್ತು.

ಯಾವುದೋ ರಾಷ್ಟ್ರೀಯ ದಿನದ, ಬಹುಶಃ ಸ್ವಾತಂತ್ರ್ಯ ದಿನದ ಅಂಗವಾಗಿ ಅಶು ಭಾಷಣ ಚರ್ಚೆ ನಡೆಯುವವರೆಗೆ ಶಕುಂತಲ ಎಂಬ ವಿದ್ಯಾರ್ಥಿನಿ ಮಲ್ಲೇಶ್ವರದ ಸರಕಾರಿ ಬಾಲಕಿಯರ ಶಾಲೆಯಲ್ಲಿ ಹೆಸರಿಲ್ಲದಂತೆ ಕಳೆದುಹೋಗಿದ್ದಳು. ಆ ದಿನಗಳಲ್ಲಿ ನನಗೆ ಚರ್ಚಾ ಸ್ಪರ್ಧೆಗಳೆಂದರೆ ಗೆಲ್ಲುವುದ ಕ್ಕೊಂದು ತೆರೆದ ಆಹ್ವಾನ.

ಪೂರ್ವಸಿದ್ಧತೆಯಿಲ್ಲದ ಉಪನ್ಯಾಸಕ್ಕಾಗಿ “ಸೌಂದರ್ಯ” ವಿಷಯವೆಂದು ಪ್ರಕಟಿಸಲಾಯಿತು. ನನ್ನ ಅಪಾರ ಓದು ನನ್ನ ರಕ್ಷಣೆಗೆ ಬಂದಿತು. ನಾನು ಕೀಟ್‌ನ ಪ್ರಸಿದ್ಧ quotation, A THING OF BEAUTY IS FOR EVER ನಿಂದ ಪ್ರಾರಂಭಿಸಿದೆ, ಅದರ ನಂತರ, ನಾನು ಗುಲಾಬಿ ಮತ್ತು ಅದರ ಸೌಂದರ್ಯದ ಬಗ್ಗೆ ಮಾತನಾಡಿದೆ. ಪ್ರೌಢಶಾಲಾ ವಿದ್ಯಾರ್ಥಿಯಿಂದ ಕೀಟ್ಸ್ ನ ಉಲ್ಲೇಖವನ್ನು ಕೇಳಿ ನನ್ನ ಶಿಕ್ಷಕರು ಆಶ್ಚರ್ಯಚಕಿತರಾದರು.

ಇದರೊಂದಿಗೆ ನೆನೆಪಿದ್ದ ಇನ್ನೊಬ್ಬ ಅಗ್ಲಾ ಕವಿಯ MY LOVE IS LIKE A RED TED ROSE ಎಂಬ ಉಕ್ತಿಯನ್ನೂ ಸೇರಿಸಿದೆ.ಮೊದಲ ಬಹುಮಾನದೊಂದಿಗೆ ಹೊರನಡೆದೆ. ಅದನಂತರ ಅಂತರ್ ಶಾಲಾ ಡಿಬೇಟ್ ಗಳಲ್ಲಿ ಮಲ್ಲೇಶ್ವರಂ ಬಾಲಕಿಯರ ಪ್ರೌಢಶಾಲೆಯ ಖಾಯಂ ಪ್ರತಿನಿಧಿಯಾದೆ ಮತ್ತು ಆ ಹಾದಿಯಲ್ಲಿ ಕೆಲವು ಟ್ರೋಫಿಗಳನ್ನು ಗೆದ್ದೆ.

ಇಷ್ಟು ಬಿಟ್ಟರೆ SSLC ಪ್ರಥಮ ದರ್ಜೆ ಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದು ಬಿಟ್ಟರೆ ನಾನು ಇನ್ಯಾವ ರೀತಿಯಲ್ಲೂ ಹೊಳೆಯಲಿಲ್ಲ .

ದುರಂತವೆಂದರೆ ನಾವು SSLC ಪರೀಕ್ಷೆಗೆ ಹಾಜರಾದಾಗ. ತಾಲೂಕು ಪ್ರಶ್ನೆ ಪತ್ರಿಕೆಗಳು ರಾಜ್ಯದಾದ್ಯಂತ ಸೋರಿಕೆಯಾದವು. ಒಂದು ದಿನದ ಮಧ್ಯಾಹ್ನದ ಪ್ರಶ್ನೆ ಪತ್ರಿಕೆಯನ್ನು ವಿಧಾನಸಭೆಯ ಸದಸ್ಯರೊಬ್ಬರು ಪ್ರದರ್ಶಿಸಿದಾಗ ವಿಧಾನಸಭೆಯಲ್ಲಿ ಕೋಲಾಹಲ. ಸರಕಾರ ತನಿಖೆಗೆ ಆದೇಶಿಸಿತು ಮತ್ತು ಮರು ಪರೀಕ್ಷೆ ನಡೆಸಲಾಯಿತು.

ಇಷ್ಟೆಲ್ಲಾ ಅವಾಂತರ ಮತ್ತು ಆಘಾತದ ನಡುವೆಯೂ ನನಗೆ ಪ್ರಥಮ ದರ್ಜೆ ಸಿಕ್ಕಿತು. ಮುಂದಿನ ದಾರಿ ಮಹಾರಾಣಿ ಕಾಲೇಜು. ಕಾದಂಬರಿಗಳಲ್ಲಿ ಓದಿದ, ಕನಸಿನಲ್ಲಿ ಕಂಡ, ಕಣ್ಣು , ತುಂಬಾ ಮನಸಿನ ಮೂಲೆ ಮೂಲೆಯಲ್ಲಿಯೂ ಇದ್ದ ಕನಸು ನನಸಾಗುವ ವೇಳೆ ಬಂದೆ ಬಿಟ್ಟಿತು.

ಈ ಅಂಕಣದ ಎಲ್ಲಾ ಭಾಗಗಳ ಓದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿSource link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 9 minutes ago