Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Wimbledon 2022: ಚೊಚ್ಚಲ ವಿಂಬಲ್ಡನ್ ಗೆದ್ದು ಇತಿಹಾಸ ನಿರ್ಮಿಸಿದ ಕಜಕಿಸ್ತಾನದ ಎಲೆನಾ ರೈಬಾಕಿನಾ..! | Wimbledon 2022 Elena Rybakina wins womens singles title becomes first Kazakh player to win championship

Elena-Rybakina.jpg


Wimbledon 2022: ಚೊಚ್ಚಲ ವಿಂಬಲ್ಡನ್ ಗೆದ್ದು ಇತಿಹಾಸ ನಿರ್ಮಿಸಿದ ಕಜಕಿಸ್ತಾನದ ಎಲೆನಾ ರೈಬಾಕಿನಾ..!

ಎಲೆನಾ ರೈಬಾಕಿನಾ

Wimbledon 2022: ವಿಂಬಲ್ಡನ್ 2022 ರಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಹೊಸ ಚಾಂಪಿಯನ್ ಉದಯವಾಗಿದೆ. ಕಜಕಿಸ್ತಾನದ ಎಲೆನಾ ರೈಬಾಕಿನಾ ಫೈನಲ್‌ನಲ್ಲಿ ಓನ್ಸ್ ಜೆಬುರ್ ಅವರನ್ನು ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಗೆದ್ದರು.

ವಿಂಬಲ್ಡನ್ 2022 (Wimbledon 2022)ರಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಹೊಸ ಚಾಂಪಿಯನ್ ಉದಯವಾಗಿದೆ. ಕಜಕಿಸ್ತಾನದ ಎಲೆನಾ ರೈಬಾಕಿನಾ (Elena Rybakina) ಫೈನಲ್‌ನಲ್ಲಿ ಓನ್ಸ್ ಜೆಬುರ್ (Ons Jebur) ಅವರನ್ನು ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಗೆದ್ದರು. ಶನಿವಾರ ಜುಲೈ 9 ರಂದು, ಸೆಂಟರ್ ಕೋರ್ಟ್‌ನಲ್ಲಿ ಐತಿಹಾಸಿಕ ಫೈನಲ್ ಪಂದ್ಯವನ್ನು ಆಡಲಾಯಿತು, ಇದರಲ್ಲಿ ಈ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ರಷ್ಯಾ ಮೂಲದ ಕಝಕ್ ಆಟಗಾರ್ತಿ ರೈಬಾಕಿನಾ ತನ್ನ ದೇಶದ ಮೊದಲ ಮಹಿಳಾ ಆಟಗಾರ್ತಿಯಾಗಿ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದರೆ, ಮತ್ತೊಂದೆಡೆ, ಟುನೀಶಿಯಾದ ಓನ್ಸ್ ಅವರು ಆಫ್ರಿಕಾ ಮತ್ತು ಅರಬ್ ಪ್ರದೇಶದಾದ್ಯಂತ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಮೊದಲ ಮಹಿಳಾ ಆಟಗಾರ್ತಿ ಕೂಡ ಆಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಯಾರೇ ಗೆದ್ದಿದ್ದರು ಅವರು ಇತಿಹಾಸ ನಿರ್ಮಿಸುತ್ತಿದ್ದರು. ಈಗ ಈ ಸಾಧನೆ ಎಲೆನಾ ಖಾತೆಗೆ ಬಂದಿದ್ದು, ಮೊದಲ ಸೆಟ್‌ನಲ್ಲಿ ಹಿನ್ನಡೆ ಕಂಡರೂ ಅಮೋಘ ಕಮ್ ಬ್ಯಾಕ್ ಮಾಡಿ ಗೆಲುವು ಸಾಧಿಸಿದ್ದಾರೆ.

ಮೊದಲ ಸೆಟ್ ಸೋತ ನಂತರ ವಾಪಸ್

2017 ರಿಂದ ಸತತ ಐದನೇ ವರ್ಷ ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನ ಹೊಸ ಚಾಂಪಿಯನ್ ಆಗಿದ್ದಾರೆ. 2018 ರಿಂದ ಕಜಕಿಸ್ತಾನ್ ಪರ ಆಡುತ್ತಿರುವ ರೈಬಾಕಿನಾ ಆರಂಭದಲ್ಲಿ ಸಾಕಷ್ಟು ಹೋರಾಟ ನಡೆಸಬೇಕಾಯಿತು. ಮೂರನೇ ಶ್ರೇಯಾಂಕದ ಓನ್ಸ್ ಮೊದಲ ಸೆಟ್‌ನಲ್ಲಿ ರೈಬಾಕಿನಾ ಅವರನ್ನು 6-3 ರಿಂದ ಸುಲಭವಾಗಿ ಹಿಂದಿಕ್ಕಿದರು. ಆದಾಗ್ಯೂ, ಈ ಸೆಟ್‌ನ ಸೋಲು ರೈಬಾಕಿನಾಗೆ ಹೊಸ ಹುರುಪು ನೀಡಿತು ಮತ್ತು 17 ನೇ ಶ್ರೇಯಾಂಕಿತ ಆಟಗಾರ್ತಿ ಮುಂದಿನ ಎರಡು ಸೆಟ್‌ಗಳಲ್ಲಿ ಅದ್ಭುತ ಪುನರಾಗಮನವನ್ನು ಮಾಡಿ 3-6, 6-2, 6-2 ರಲ್ಲಿ ಪಂದ್ಯವನ್ನು ಗೆದ್ದು ಪ್ರಶಸ್ತಿಯನ್ನು ಗೆದ್ದರು.

ಮಾಸ್ಕೋದಲ್ಲಿ ಜನಿಸಿದ ರೈಬಾಕಿನಾ ಅವರು ತಮ್ಮ ಸರ್ವ್ ಮತ್ತು ಶಕ್ತಿಶಾಲಿ ಫೋರ್‌ಹ್ಯಾಂಡ್‌ಗಳನ್ನು ಚೆನ್ನಾಗಿ ಬಳಸಿಕೊಂಡರು. ಈ ಮೂಲಕ ಜಬರ್ ಅವರ ಸತತ 12 ಪಂದ್ಯಗಳ ಗೆಲುವಿನ ಸರಣಿಯನ್ನು ರೈಬಾಕಿನಾ ಮುರಿದರು.

ಅದ್ಭುತ ಆಟ

ಇದನ್ನೂ ಓದಿ



ಇದು 1962 ರ ನಂತರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಮೊದಲ ಮಹಿಳಾ ಪ್ರಶಸ್ತಿ ಪಂದ್ಯವಾಗಿದ್ದು, ಇದರಲ್ಲಿ ಇಬ್ಬರೂ ಆಟಗಾರ್ತಿಯರು ತಮ್ಮ ಮೊದಲ ಪ್ರಮುಖ ಫೈನಲ್ ತಲುಪಿದರು. ರೈಬಕಿನಾ ಅವರ ಶ್ರೇಯಾಂಕವು 23 ಆಗಿದೆ. 1975 ರಲ್ಲಿ WTA ಕಂಪ್ಯೂಟರ್ ಶ್ರೇಯಾಂಕಗಳನ್ನು ಪರಿಚಯಿಸಿದಾಗಿನಿಂದ, ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ಏಕೈಕ ಮಹಿಳಾ ಆಟಗಾರ್ತಿ ರೈಬಾಕಿನಾಗಿಂತ ಕಡಿಮೆ ಶ್ರೇಯಾಂಕವನ್ನು ಹೊಂದಿದ್ದಾರೆ. ಅದರ ಕೀರ್ತಿ, 2007 ರಲ್ಲಿ 31 ನೇ ಸ್ಥಾನದಲ್ಲಿದ್ದು, ಈ ಪ್ರಶಸ್ತಿಯನ್ನು ಗೆದ್ದಿದ್ದ ವೀನಸ್ ವಿಲಿಯಮ್ಸ್​ಗೆ ಸಲ್ಲುತ್ತದೆ.

ತಾಜಾ ಸುದ್ದಿ



Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 2 minutes ago