Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

India vs England: 77 ಓವರ್​ಗಳಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ ಆಂಗ್ಲರು..! | India vs England: England Chased Just 78 overs

Untitled2-10.jpg


India vs England: ಎಡ್ಜ್​ಬಾಸ್ಟನ್​ ಟೆಸ್ಟ್​ನಲ್ಲಿ ಭಾರತದ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ತಂಡವು ಟೆಸ್ಟ್ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸಿದೆ. ಈ ಮೂಲಕ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಲು ಯಶಸ್ವಿಯಾಗಿದೆ.

India vs England 5th Test: ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಎಂದೇ ಕರೆಸಿಕೊಳ್ಳುವ ಟೀಮ್ ಇಂಡಿಯಾ (Team India) ಬೌಲರ್​ಗಳನ್ನು ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳು ಬೆಂಡೆತ್ತಿರುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ತಾಳ್ಮೆಯ ಪ್ರತೀಕವಾಗಿರುವ ಟೆಸ್ಟ್​ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಹೊಸ ಆಕ್ರಮಣಕಾರಿ ತಂಡವಾಗಿ ಗುರುತಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯೇ ಇಂಗ್ಲೆಂಡ್ ತಂಡವು ಕಳೆದ ನಾಲ್ಕು ಟೆಸ್ಟ್ ಪಂದ್ಯಗಳನ್ನು ಚೇಸ್ ಮಾಡಿ ಗೆದ್ದಿರುವುದು. ಈ ಬಾರಿ ಬೃಹತ್ ಮೊತ್ತವನ್ನೇ ಚೇಸ್ ಮಾಡಿ ಐತಿಹಾಸಿಕ ಸಾಧನೆ ಮಾಡಿರುವುದು ವಿಶೇಷ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ರಿಷಭ್ ಪಂತ್ (146) ಹಾಗೂ ಜಡೇಜಾ (104) ಅವರ ಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 416 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು ಕೇವಲ 284 ರನ್ ಮಾತ್ರ. ಇತ್ತ 3ನೇ ದಿನದಾಟದಲ್ಲೇ ಸೆಕೆಂಡ್ ಇನಿಂಗ್ಸ್ ಅವಕಾಶ ಪಡೆದ ಟೀಮ್ ಇಂಡಿಯಾಗೆ ಬೃಹತ್ ಮೊತ್ತ ಪೇರಿಸುವ ಉತ್ತಮ ಅವಕಾಶವಿತ್ತು.

ಆದರೆ ಭಾರತೀಯ ಬ್ಯಾಟ್ಸ್​ಮನ್​ಗಳು ಬಾರಿಸಿದ್ದು ಕೇವಲ 245 ರನ್​ಗಳು ಮಾತ್ರ. ಇದಾಗ್ಯೂ ಮೊದಲ ಇನಿಂಗ್ಸ್​ನಲ್ಲಿ 132 ರನ್​ಗಳ ಮುನ್ನಡೆ ಹೊಂದಿದ್ದ ಟೀಮ್ ಇಂಡಿಯಾ ಇಂಗ್ಲೆಂಡ್​ಗೆ ಒಟ್ಟು 378 ರನ್​ಗಳ ಟಾರ್ಗೆಟ್ ನೀಡಿತು. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯವಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದೆರೆ ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಟೀಮ್ ಇಂಡಿಯಾ ಪಾಲಿಗಿತ್ತು. ಆದರೆ ಕೇವಲ 77 ಓವರ್​ಗಳಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಇಂಗ್ಲೆಂಡ್ ತಂಡ ತಲೆಕೆಳಗಾಗಿಸಿದೆ.

378 ರನ್​ಗಳ ಬೃಹತ್ ಗುರಿಯನ್ನು ಕೇಂದ್ರವಾಗಿಸಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಆರಂಭಿಕ ಆಟಗಾರ ಅಲೆಕ್ಸ್ ಲೀಸ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 65 ಎಸೆತಗಳಲ್ಲಿ 56 ರನ್ ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮತ್ತೊಂದೆಡೆ ಜಾಕ್ ಕ್ರಾವ್ಲಿ ಕೂಡ ಉಪಯುಕ್ತ 46 ರನ್​ಗಳ ಕಾಣಿಕೆ ನೀಡಿದರು. ಇದಾಗ್ಯೂ ಟೀಮ್ ಇಂಡಿಯಾ 109 ರನ್​ಗಳಿಗೆ 3 ವಿಕೆಟ್ ಪಡೆದು ತುಸು ಮೇಲುಗೈ ಸಾಧಿಸಿತ್ತು. ಆದರೆ ಜೋ ರೂಟ್ ಹಾಗೂ ಜಾನಿ ಬೈರ್​ಸ್ಟೋವ್ ಆಗಮನದೊಂದಿಗೆ ಇಂಗ್ಲೆಂಡ್ ತಂಡದ ಗುರಿಯೇನು ಎಂಬುದು ಸಹ ಸ್ಪಷ್ಟವಾಗಿತ್ತು.

ನಾಲ್ಕನೇ ದಿನದಾಟದಲ್ಲೇ ರೂಟ್ ಹಾಗೂ ಬೈರ್​ಸ್ಟೋವ್ ಬಿರುಸಿನ ಇನಿಂಗ್ ಆಡಿದ್ದರು. ಟೀಮ್ ಇಂಡಿಯಾ ಬೌಲರ್​ಗಳನ್ನು ಬೆಂಡೆತ್ತಿದ್ದ ಈ ಜೋಡಿ ದಿನದಾಟದ ಅಂತ್ಯಕ್ಕೆ 259 ರನ್​ ಕಲೆಹಾಕಿದ್ದರು. ಅಂದರೆ 378 ರನ್​ಗಳ ಟಾರ್ಗೆಟ್​ನ ಬಹುತೇಕ ಸ್ಕೋರ್​ ಅನ್ನು ನಾಲ್ಕನೇ ದಿನದಾಟದಲ್ಲಿ ಕಲೆಹಾಕಿ ಗೆಲುವನ್ನು ಖಚಿತಪಡಿಸಿಕೊಂಡಿದ್ದರು.

ಇನ್ನು ಐದನೇ ದಿನದಾಟದಲ್ಲೂ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಭಾರತೀಯ ಬೌಲರ್​ಗಳ ಬೆವರಿಳಿಸಿದ ಜೋ ರೂಟ್ ಕೇವಲ 136 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಜಾನಿ ಬೈರ್​ಸ್ಟೋವ್ ಕೂಡ 138 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಅಂದರೆ ಶತಕ ಬಾರಿಸಲು ಇಬ್ಬರು ಬ್ಯಾಟ್ಸ್​ಮನ್​ಗಳು ಹೆಚ್ಚುವರಿಯಾಗಿ ತೆಗೆದುಕೊಂಡಿದ್ದು ಕೇವಲ 36 ಹಾಗೂ 38 ಎಸೆತಗಳನ್ನು ಮಾತ್ರ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿಅಂತಿಮವಾಗಿ ಜೋ ರೂಟ್ 173 ಎಸೆತಗಳಲ್ಲಿ 146 ರನ್​ ಬಾರಿಸಿದರೆ, ಜಾನಿ ಬೈರ್​ಸ್ಟೋವ್ 145 ಎಸೆತಗಳಲ್ಲಿ 114 ರನ್​ ಚಚ್ಚಿದರು. ಪರಿಣಾಮ ಟೀಮ್ ಇಂಡಿಯಾ ನೀಡಿದ 378 ರನ್​ಗಳ ಟಾರ್ಗೆಟ್​ ಅನ್ನು ಇಂಗ್ಲೆಂಡ್ ತಂಡವು ಕೇವಲ 77 ಓವರ್​ಗಳಲ್ಲೇ ಚೇಸ್ ಮಾಡಿತು. ಅಂದರೆ ಪ್ರತಿ ಓವರ್​ಗೆ 4.9 ಸರಾಸರಿಯಲ್ಲಿ ರನ್​ಗಳಿಸಿದ ಇಂಗ್ಲೆಂಡ್ ತಂಡವು ಬೃಹತ್ ಮೊತ್ತವನ್ನು ಚೇಸ್ ಮಾಡಿ ಹೊಸ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ದ 359 ಚೇಸ್ ಮಾಡಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿರುವ ಆಂಗ್ಲರು, 77 ಓವರ್​ಗಳಲ್ಲಿ 378 ರನ್​ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಟೀಮ್ ಇಂಡಿಯಾ ವಿರುದ್ದ ಎಂಬುದು ವಿಶೇಷ.

Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 6 minutes ago