Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಬುಡಕಟ್ಟು ಜನಾಂಗದವರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಅಲ್ಲೂರಿ ಸೀತಾರಾಮ ರಾಜು ಯಾರು?,ಇಲ್ಲಿದೆ ಮಹಾನ್ ವ್ಯಕ್ತಿತ್ವದ ಪರಿಚಯ | 125th birth anniversary of Alluri Sitarama Raju a jungle warrior all you need to know

Alluri.jpg


ಬುಡಕಟ್ಟು ಜನಾಂಗದವರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಅಲ್ಲೂರಿ ಸೀತಾರಾಮ ರಾಜು ಯಾರು?,ಇಲ್ಲಿದೆ ಮಹಾನ್ ವ್ಯಕ್ತಿತ್ವದ  ಪರಿಚಯ

ಅಲ್ಲೂರಿ ಸೀತಾರಾಮ ರಾಜು ಅವರ ಪ್ರತಿಮೆ

Alluri Sitarama Raju ಜುಲೈ 4, 1897 ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಲ್ಲೂರಿ, ಬಾಲಕನಾಗಿದ್ದಾಗ  ಬ್ರಿಟಿಷರ ಆಳ್ವಿಕೆಯಲ್ಲಿ ದೇಶವಾಸಿಗಳು ಅನುಭವಿಸುತ್ತಿರುವ ನೋವುಗಳ ಬಗ್ಗೆ ಕೇಳಿ ಮರುಕಪಟ್ಟಿದ್ದರು.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಭೀಮಾವರಂ (ಆಂಧ್ರಪ್ರದೇಶ)ದಲ್ಲಿ ಅಲ್ಲೂರಿ ಸೀತಾರಾಮ ರಾಜು (Alluri Sitarama Raju) ಅವರ 30 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದವರು ಅಲ್ಲೂರಿ ಸೀತಾರಾಮ ರಾಜು. ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಮೋದಿಯವರು ಆಂಧ್ರ ಪ್ರದೇಶಕ್ಕೆ (Andhra pradesh) ಭೇಟಿ ನೀಡಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿದ್ದಾರೆ. ಭಾರತೀಯ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ್ ಉಪಕ್ರಮವು ದೇಶದ ಸ್ವಾತಂತ್ರ್ಯಹೋರಾಗಾರರು ನೀಡಿರುವ ಕೊಡುಗೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ. ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮ ದಿನಾಚರಣೆ ಮತ್ತು ರಾಂಪಾ ದಂಗೆಯ 100ನೇ ವರ್ಷ ಈಗ ಆಚರಿಸಲಾಗುತ್ತಿದೆ. ಎರಡು ತೆಲುಗು ರಾಜ್ಯಗಳಲ್ಲಿ ಮನೆ ಮಾತಾಗಿರುವ ಅಲ್ಲೂರಿ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.

ಅಲ್ಲೂರಿ ಸೀತಾರಾಮ ರಾಜು ಅವರ ಪರಿಚಯ
ಜುಲೈ 4, 1897 ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಲ್ಲೂರಿ, ಬಾಲಕನಾಗಿದ್ದಾಗ  ಬ್ರಿಟಿಷರ ಆಳ್ವಿಕೆಯಲ್ಲಿ ದೇಶವಾಸಿಗಳು ಅನುಭವಿಸುತ್ತಿರುವ ನೋವುಗಳ ಬಗ್ಗೆ ಕೇಳಿ ಮರುಕಪಟ್ಟಿದ್ದರು. ಬ್ರಿಟಿಷರ ವಿರುದ್ಧ ಆಂಧ್ರಪ್ರದೇಶದ ಪೂರ್ವ ಘಟ್ಟಗಳಲ್ಲಿ ರಾಂಪಾ ದಂಗೆಗೆ ಹೆಸರುವಾಸಿಯಾದ ಅಲ್ಲೂರಿ ಅವರನ್ನು , ಮಾನ್ಯಂ ವೀರುಡು (ಜಂಗಲ್ ವಾರಿಯರ್) ಎಂದೂ ಕರೆಯುತ್ತಾರೆ, ಅವರು ಸಾವಿರಾರು ಬಡ ಆದಿವಾಸಿಗಳನ್ನು ಒಟ್ಟುಗೂಡಿಸಿ ಅವರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಸಿದ್ದರು.

ಸ್ನೇಹಿತರೊಬ್ಬರು ಕಿಂಗ್ ಜಾರ್ಜ್ ಅವರ ಚಿತ್ರವಿರುವ ಬ್ಯಾಡ್ಜ್‌ಗಳನ್ನು ನೀಡಿದಾಗ ಅಲ್ಲೂರಿ ಅದನ್ನು ತಮ್ಮ ಅಂಗಿಯ ಮೇಲೆ ಧರಿಸಿ, ಇದು ದಾಸ್ಯವನ್ನು ತೋರಿಸುತ್ತದೆ. ವಿದೇಶಿ ಆಡಳಿತಗಾರನು ನಮ್ಮ ಜೀವನವನ್ನು ಪುಡಿಮಾಡುತ್ತಿದ್ದಾನೆ ಎಂಬುದನ್ನು ನಿಮ್ಮೆಲ್ಲರಿಗೂ ನೆನಪಿಸಲು ನಾನು ಅದನ್ನು ನನ್ನ ಹೃದಯದ ಬಳಿ ನನ್ನ ಅಂಗಿಯ ಮೇಲೆ ಪಿನ್ ಮಾಡಿದ್ದೇನೆ ಎಂದು ಹೇಳಿದ್ದರು.

ಇದನ್ನೂ ಓದಿ



ದೇಶದಾದ್ಯಂತ ಸುತ್ತಾಡಿ ಅವರು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ಬಿಲ್ಲು ಬಾಣದಂತ ಸಾಂಪ್ರದಾಯಿಕ ಆಯುಧಗಳನ್ನು ಬಳಸಿ ಅವರು ಕೆಲವು ಯುದ್ಧಗಳನ್ನು ಗೆದ್ದರು. ಕೆಲವು ಪೊಲೀಸ್ ಠಾಣೆಗಳ ಮೇಲೂ ದಾಳಿ ನಡೆಸಿದರು. ಕಾಡಿನ ಬಗ್ಗೆ ನಿಖರವಾದ ತಿಳುವಳಿಕೆ ಮತ್ತು ಕಾಡಿನ ಜನರ ಬೆಂಬಲದಿಂದ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು. ಹೆಚ್ಚಿನ ಇತಿಹಾಸಗಾರರು ಅವರ ಕೊಡುಗೆ ಬಗ್ಗೆ ಉಲ್ಲೇಖಿಸಿಲ್ಲ. ಇತಿಹಾಸಕಾರರಾಗ ಸುಮಿತ್ ಸರ್ಕಾರ್ ಅವರು ಮಾತ್ರ ಅಲ್ಲೂರಿ ಅವರನ್ನು ಬುಡಕಟ್ಟು ಜನಾಂಗದದ ನಾಯಕ ಎಂದು ಬಿಂಬಿಸಿದ್ದರು.



Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 8 minutes ago