Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

‘ನನ್ನನ್ನೇಕೆ ದೂಷಿಸುತ್ತೀರಿ?’; ಏಕಾಏಕಿ ಸಿಟ್ಟಾದ ನಿರ್ಮಾಪಕ ಕರಣ್​ ಜೋಹರ್ | Karan Johar open his mouth for the first time after several celebrities tested covid positive in his party

Karan-Johar-1.jpg


ಕರಣ್ ಅವರು ಈ ಬಾರಿ 50ನೇ ವರ್ಷಕ್ಕೆ ಕಾಲಿಟ್ಟರು. ಈ ಪಾರ್ಟಿಯಲ್ಲಿ ಭಾಗಿಯಾದ ಅನೇಕ ಸೆಲೆಬ್ರಿಟಿಗಳಿಗೆ ಕೊವಿಡ್ ಆಗಿತ್ತು ಎಂದು ವರದಿಗಳು ಹೇಳಿವೆ. ಇದನ್ನು ಕೆಲವರು ‘ಕರಣ್ ಜೋಹರ್ ಪಾರ್ಟಿ ಮಹಿಮೆ’ ಎಂದು ಲೇವಡಿ ಮಾಡಲಾಯಿತು.

ಕರಣ್ ಜೋಹರ್ ಅವರ (Karan Johar) ಬರ್ತ್​ಡೇ ಪಾರ್ಟಿಗೆ ಆಗಮಿಸಿದ 55ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಕೊವಿಡ್ ಅಂಟಿದೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಯಶ್ ರಾಜ್​ ಸ್ಟುಡಿಯೋದಲ್ಲಿ ನಡೆದ ಈ ಅದ್ದೂರಿ ಪಾರ್ಟಿ ಬಗ್ಗೆ ಅನೇಕ ವರದಿಗಳು ಬಿತ್ತರಗೊಂಡವು. ಅದ್ದೂರಿ ಪಾರ್ಟಿ ಕೊವಿಡ್ ಹಾಟ್​ಸ್ಪಾಟ್ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿದವು. ಎಲ್ಲಾ ಸೆಲೆಬ್ರಿಟಿಗಳಿಗೆ ಪಾರ್ಟಿ ಕೊಟ್ಟಿದ್ದು ಅಲ್ಲದೆ, ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಿಂದ ಬಂದ ಟೀಕೆಯನ್ನು ಕರಣ್​ ಜೋಹರ್ ಸ್ವೀಕರಿಸಬೇಕಾಯಿತು. ಈ ಬಗ್ಗೆ ಕರಣ್ ಜೋಹರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನನ್ನನ್ನೇಕೆ ದೂಷಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಕರಣ್ ಅವರು ಈ ಬಾರಿ 50ನೇ ವರ್ಷಕ್ಕೆ ಕಾಲಿಟ್ಟರು. ಹೀಗಾಗಿ ಬರ್ತ್​ಡೇ ಪಾರ್ಟಿ ಜೋರಾಗಿಯೇ ಇತ್ತು. ರಶ್ಮಿಕಾ ಮಂದಣ್ಣ, ಬಾಲಿವುಡ್​ ನಟ ಶಾರುಖ್ ಖಾನ್​, ಟಾಲಿವುಡ್​ ಹೀರೋ ವಿಜಯ್ ದೇವರಕೊಂಡ ಮೊದಲಾದವರು ಭಾಗಿ ಆಗಿದ್ದರು. ಪಾರ್ಟಿ ಮುಗಿದ ಕೆಲವೇ ದಿನಗಳಲ್ಲಿ ಕತ್ರಿನಾ ಹಾಗೂ ಶಾರುಖ್​ಗೆ ಕೊವಿಡ್ ಪಾಸಿಟಿವ್ ಆಯಿತು. ಇವರಲ್ಲದೆ ಇನ್ನೂ ಅನೇಕ ಸೆಲೆಬ್ರಿಟಿಗಳಿಗೆ ಕೊವಿಡ್ ಆಗಿತ್ತು ಎಂದು ವರದಿಗಳು ಹೇಳಿವೆ. ಇದನ್ನು ಕೆಲವರು ‘ಕರಣ್ ಜೋಹರ್ ಪಾರ್ಟಿ ಮಹಿಮೆ’ ಎಂದು ಲೇವಡಿ ಮಾಡಿದರು. ಈ ವಿಚಾರ ಕರಣ್​ಗೆ ಬೇಸರ ತರಿಸಿದೆ.

‘ಒಂದು ವಾರದಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತಿರುತ್ತವೆ. ಯಾರಿಗೆ ಎಲ್ಲಿ ಕೊವಿಡ್ ಅಂಟಿದೆ ಅಂತ ಹೇಗೆ ಹೇಳುವುದು?ಪಾರ್ಟಿ ಮಾತ್ರ ಅಲ್ಲ, ಮದುವೆಗಳಿದ್ದವು, ಅನೇಕ ಕಾರ್ಯಕ್ರಮಗಳಿದ್ದವು, ಶೂಟಿಂಗ್ ಇತ್ತು. ನನ್ನನ್ನು ಮಾತ್ರ ಏಕೆ ದೂಷಿಸಲಾಗುತ್ತಿದೆ? ಎಲ್ಲವೂ ನನಗೆ ಏಕೆ ಬರುತ್ತದೆ? ಕೊವಿಡ್​​ ಹರಡಿದ್ದಕ್ಕೂ ನನಗೆ ಯಾವುದೇ ಸಂಬಂಧವಿಲ್ಲ. ನಾನು ಇದಕ್ಕೆ ಪೂರ್ಣವಿರಾಮ ಇಡಲು ಬಯಸುತ್ತೇನೆ. ಅದು ಆಗಿದ್ದು ನನ್ನಿಂದ ಅಲ್ಲ. ಈ ಕೊವಿಡ್​ ಆರಂಭಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ ಕರಣ್​.

ಇದನ್ನೂ ಓದಿ: ಕರಣ್ ಜೋಹರ್ ಪಾರ್ಟಿ ಎಫೆಕ್ಟ್​; ಶಾರುಖ್​, ಕತ್ರಿನಾಗೆ ಕೊರೊನಾ ಪಾಸಿಟಿವ್

‘ಯಶ್ ರಾಜ್ ಫಿಲ್ಮ್ಸ್​ ಸ್ಟುಡಿಯೋದಲ್ಲಿ ಪಾರ್ಟಿ ಆಯೋಜನೆ ಮಾಡುವುದು ಆದಿತ್ಯ ಚೋಪ್ರಾ ಅವರ ಐಡಿಯಾ ಆಗಿತ್ತು. ನನ್ನ ತಂಡ ಅಲ್ಲಿ ಪಾರ್ಟಿ ಆಯೋಜನೆ ಮಾಡಿತು. ಕೊವಿಡ್​ ಅಲ್ಲಿಂದ ಹರಡಿದೆಯೋ ಅಥವಾ ಹರಡಿಲ್ಲವೋ ಎನ್ನುವ ಬಗ್ಗೆ ನಾನು ಮಾತನಾಡುತ್ತಿಲ್ಲ. ಆ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳುತ್ತಿದ್ದೇನೆ’ ಎಂಬುದು ಕರಣ್ ಜೋಹರ್ ಮಾತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 4 minutes ago