Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Tax Saving FD: ಹಿರಿಯ ನಾಗರಿಕರಿಗಾಗಿ ಒಳ್ಳೆ ಬಡ್ಡಿ ದರ ನೀಡುವ ತೆರಿಗೆ ಉಳಿತಾಯ ಎಫ್​ಡಿ; ಇಲ್ಲಿವೆ ಟಾಪ್ ಬ್ಯಾಂಕ್​ಗಳು | Tax Saving Fixed Deposits For Senior Citizens Here Is The Top Banks To Offer Best Interest Rate

Investment-Plan.jpg


Tax Saving FD: ಹಿರಿಯ ನಾಗರಿಕರಿಗಾಗಿ ಒಳ್ಳೆ ಬಡ್ಡಿ ದರ ನೀಡುವ ತೆರಿಗೆ ಉಳಿತಾಯ ಎಫ್​ಡಿ; ಇಲ್ಲಿವೆ ಟಾಪ್ ಬ್ಯಾಂಕ್​ಗಳು

ಸಾಂದರ್ಭಿಕ ಚಿತ್ರ

ಹಿರಿಯ ನಾಗರಿಕರಿಗೆ ತೆರಿಗೆ ಉಳಿತಾಯಕ್ಕೆ ಎಫ್​ಡಿ ವಿವರ ಇಲ್ಲಿದೆ. ಇದರ ಜತೆಗೆ ಅತ್ಯುತ್ತಮ ಬಡ್ಡಿ ದರವೂ ದೊರೆಯುತ್ತದೆ. ಅತ್ಯುತ್ತಮ ಬಡ್ಡಿ ದರ ನೀಡುವ ಟಾಪ್ ಬ್ಯಾಂಕ್​ಗಳ ವಿವರ ಇಲ್ಲಿದೆ.

ಜಾಸ್ತಿ ರಿಸ್ಕ್ ಬೇಡ ಅಂದುಕೊಳ್ಳುವವರಿಗೆ ಬ್ಯಾಂಕ್​ಗಳು ಅಥವಾ ಫೋಸ್ಟ್​ ಆಫೀಸ್​ನಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡುವುದು ಅತ್ಯುತ್ತಮ ಹೂಡಿಕೆ ಆಯ್ಕೆ ಎನಿಸಿಕೊಳ್ಳುತ್ತದೆ. ಆದರೆ ಈಚೆಗೆ ಹೊಸ ತಲೆಮಾರಿನ ಹೂಡಿಕೆದಾರರು ಸ್ಟಾಕ್​ಗಳು, ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. ಆದರೆ ನಿಶ್ಚಿತ ಆದಾಯ ಎದುರು ನೋಡುವ, ಹಿರಿಯ ನಾಗರಿಕರು ಈಗಲೂ ಎಫ್​.ಡಿ.ಗೆ ಪ್ರಾಶಸ್ತ್ಯ ನೀಡುತ್ತಾರೆ. ಯಾವುದೇ ಅಪಾಯ ಇಲ್ಲ ಹಾಗೂ ಆರಂಭದಲ್ಲಿ ಎಷ್ಟು ಖಾತ್ರಿ ನೀಡಲಾಗುತ್ತದೋ ಅಷ್ಟನ್ನು ಬಡ್ಡಿ ನೀಡಲಾಗುತ್ತದೆ ಮತ್ತು ಯಾವುದೇ ಹಣಕಾಸಿನ ಅಪಾಯ ಸಹ ಇಲ್ಲ.

ಏನಿದು ತೆರಿಗೆ ಉಳಿತಾಯದ ಎಫ್​ಡಿ

ಇದು ಬಹಳ ಜನಪ್ರಿಯವಾದ ಉಳಿತಾಯ ಆಯ್ಕೆ. ಯಾವುದೇ ಅಪಾಯ ಇಲ್ಲದ ಕಡೆ ಹೂಡಿಕೆ ಮಾಡಬೇಕು ಹಾಗೂ ತೆರಿಗೆ ಕಡಿತದ ಅನುಕೂಲವೂ ಬೇಕು ಅಂದುಕೊಳ್ಳುವವರಿಗೆ ಟ್ಯಾಕ್ಸ್​ ಸೇವಿಂಗ್ ಎಫ್​ಡಿ ಎಂಬುದು ಅತ್ಯುತ್ತಮ ಆಯ್ಕೆ. ಎಲ್ಲ ಬ್ಯಾಂಕ್​ಗಳು ಈ ಎಫ್​ಡಿಯನ್ನು ಒದಗಿಸುತ್ತವೆ. ನಿಶ್ಚಿತ ಬಡ್ಡಿ ದರದ ಆದಾಯವನ್ನೂ ನೀಡುತ್ತದೆ. ಜತೆಗೆ ಆದಾಯ ತೆರಿಗೆ ಉಳಿತಾಯವೂ ಲಭ್ಯ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಸಿಗುತ್ತದೆ. ಟ್ಯಾಕ್ಸ್ ಸೇವಿಂಗ್ ಎಫ್​ಡಿ ಹಿರಿಯ ನಾಗರಿಕರ ಪಾಲಿಗೆ ಅತ್ಯುತ್ತಮ ಆಯ್ಕೆ. ಈ ಕಡಿತವನ್ನು ತಡೆಯಬೇಕು ಅಂತಾದಲ್ಲಿ ಫಾರ್ಮ್ 15G ಹಾಗೂ ಹಿರಿಯ ನಾಗರಿಕರು ಫಾರ್ಮ್ 15H ಸಲ್ಲಿಸಬೇಕು. ಇದನ್ನು ಹೊರತುಪಡಿಸಿ, ಸೆಕ್ಷನ್ 80TTB ಅಡಿಯಲ್ಲಿ ಬಡ್ಡಿ ಗಳಿಕೆ ಮೇಲೆ 50 ಸಾವಿರ ರೂಪಾಯಿ ತನಕ ವಿನಾಯಿತಿ ದೊರೆಯುತ್ತದೆ.

ಈ ಎಫ್​ಡಿಗಳಿಗೆ ಕನಿಷ್ಠ ಐದು ವರ್ಷದ ಲಾಕ್-ಇನ್ ಅವಧಿ ಹಾಗೂ ಬಡ್ಡಿ ಗಳಿಕೆಗೆ ತೆರಿಗೆ ಪಾವತಿದಾರರ ಬ್ರ್ಯಾಕೆಟ್ ಆಧಾರದಲ್ಲಿ ತೆರಿಗೆ ಬೀಳುತ್ತದೆ. ಒಂದು ವೇಳೆ ಹೂಡಿಕೆ ಜಂಟಿಯಾಗಿ ಮಾಡಿದ್ದಲ್ಲಿ ಎಫ್​ಡಿ ರಸೀದಿಯಲ್ಲಿ ಇರುವ ಮೊದಲ ವ್ಯಕ್ತಿಗೆ ತೆರಿಗೆ ಅನುಕೂಲ ಒದಗುತ್ತದೆ. ಟ್ಯಾಕ್ಸ್ ಸೇವಿಂಗ್ ಎಫ್​ಡಿಗಳಲ್ಲಿ ಅವಧಿಪೂರ್ವವಾಗಿ ಹಣ ತೆಗೆದುಕೊಳ್ಳುವುದಕ್ಕೆ ಅವಕಾಶ ಇಲ್ಲ. ಎಫ್​ಡಿ ಅವಧಿ 5ರಿಂದ 10 ವರ್ಷಗಳ ಅವಧಿಗೆ ಇರುತ್ತದೆ.

2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಟಾಕ್ಸ್​ ಸೇವಿಂಗ್ ಎಫ್​ಡಿಗೆ ಉತ್ತಮ ಬಡ್ಡಿ ದರ ನೀಡುವ ಟಾಪ್ 10 ಬ್ಯಾಂಕ್​ಗಳು (ಜೂನ್ 6, 2022ರಂತೆ)

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7.25

ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7.25

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7.10

ಡಿಸಿಬಿ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7.10

ಯೆಸ್​ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7

ಇಂಡಸ್​ ಇಂಡ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7

ಆರ್​ಬಿಎಲ್​ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 6.80

ಐಡಿಎಫ್​ಸಿ ಫಸ್ಟ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 6.75

ಆಕ್ಸಿಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 6.50

ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 6.50

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: FD Interest Rates: ಎಚ್​ಡಿಎಫ್​ಸಿ ಬ್ಯಾಂಕ್ Vs ಎಸ್​ಬಿಐ Vs ಆಕ್ಸಿಸ್ ಬ್ಯಾಂಕ್ ಎಲ್ಲಿ, ಎಷ್ಟಿದೆ ಎಫ್​ಡಿ ಮೇಲೆ ಬಡ್ಡಿ ದರ



Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,591,112
Recovered
0
Deaths
528,655
Last updated: 1 minute ago