Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಸೌತ್​ ಚಿತ್ರಗಳ ಎದುರು ಶೋ ಕಳೆದುಕೊಂಡ ‘ಸಾಮ್ರಾಟ್​ ಪೃಥ್ವಿರಾಜ್​’? ‘ವಿಕ್ರಮ್’​, ‘ಮೇಜರ್’​ ಮೇಲುಗೈ | Reports say Samrat Prithviraj losing shows due to Vikram and Major movie

Major-Prithviraj-Kamal-Haasan.jpg


ಸೌತ್​ ಚಿತ್ರಗಳ ಎದುರು ಶೋ ಕಳೆದುಕೊಂಡ ‘ಸಾಮ್ರಾಟ್​ ಪೃಥ್ವಿರಾಜ್​’? ‘ವಿಕ್ರಮ್’​, ‘ಮೇಜರ್’​ ಮೇಲುಗೈ

ಮೇಜರ್​, ಸಾಮ್ರಾಟ್​ ಪೃಥ್ವಿರಾಜ್​. ವಿಕ್ರಮ್​

Samrat Prithviraj: ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾಗೆ ವಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ದಕ್ಷಿಣದಲ್ಲಿ ‘ವಿಕ್ರಮ್​’ ಮತ್ತು ‘ಮೇಜರ್​’ ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ.

ಭಾರತೀಯ ಚಿತ್ರರಂಗದಲ್ಲಿ ಈಗ ‘ಬಾಲಿವುಡ್​ ವರ್ಸಸ್​ ಸೌತ್​ ಸಿನಿಮಾ’ ಎಂಬ ಚರ್ಚೆ ಶುರುವಾಗಿದೆ. ಅದಕ್ಕೆ ತಕ್ಕಂತೆಯೇ ಸಿನಿಮಾಗಳ ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಕೂಡ ಆಗುತ್ತಿದೆ. ಒಂದು ಕಾಲದಲ್ಲಿ ದೇಶಾದ್ಯಂತ ಹವಾ ಮಾಡುತ್ತಿದ್ದ ಹಿಂದಿ ಸಿನಿಮಾಗಳು ಈಗ ಮಂಕಾಗಿವೆ. ಇತ್ತೀಚೆಗೆ ರಿಲೀಸ್​ ಆದ ಬಹುತೇಕ ಬಾಲಿವುಡ್ (Bollywood)​ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೊರಗಿವೆ. ಅದರಲ್ಲೂ ‘ಕೆಜಿಎಫ್​: ಚಾಪ್ಟರ್​ 2’, ‘ಆರ್​ಆರ್​ಆರ್​’, ‘ಪುಷ್ಪ’ ರೀತಿಯ ಹೈ ಬಜೆಟ್​ ಚಿತ್ರಗಳ ಎದುರಿನಲ್ಲಿ ಹಿಂದಿ ಚಿತ್ರರಂಗದ ಸ್ಟಾರ್​ ನಟರ ಸಿನಿಮಾಗಳೇ ಸೋತು ಸುಮ್ಮನಾಗಿವೆ. ಈಗ ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಸಿನಿಮಾ ಅಬ್ಬರಿಸುತ್ತಿದೆ. ಇದೇ ಸಮಯಕ್ಕೆ ರಿಲೀಸ್​ ಆಗಿರುವ ಅಕ್ಷಯ್​ ಕುಮಾರ್​ (Akshay Kumar) ಅಭಿನಯದ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡುತ್ತಿಲ್ಲ. ಈ ನಡುವೆ ಒಂದು ಗಾಸಿಪ್​ ಕೂಡ ಹಬ್ಬಿದೆ. ‘ವಿಕ್ರಮ್​’ ಮತ್ತು ‘ಮೇಜರ್​’ ಸಿನಿಮಾಗಳ ಕಾರಣದಿಂದ ‘ಸಾಮ್ರಾಟ್​ ಪೃಥ್ವಿರಾಜ್​’ (Samrat Prithviraj) ಚಿತ್ರಕ್ಕೆ ಶೋ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಕೆಲವೆಡೆ ವರದಿ ಆಗಿದೆ.

‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಮೊದಲ ದಿನ (ಜೂನ್​ 3) ಗಳಿಸಿದ್ದು 10.70 ಕೋಟಿ ರೂಪಾಯಿ. ಎರಡನೇ ದಿನವಾದ ಶನಿವಾರ ಸಣ್ಣ ಪ್ರಮಾಣದ ಏರಿಕೆ ಆಯಿತು. ಅಂದರೆ, 12.60 ಕೋಟಿ ರೂಪಾಯಿ ಆದಾಯ ಬಂತು. ಮೂರನೇ ದಿನವಾದ ಭಾನುವಾರ (ಜೂನ್​ 5) 16.10 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ನಿಧಾನವಾಗಿ ಇದರ ಗಳಿಕೆ ಹೆಚ್ಚುತ್ತಿದೆ. ಆದರೆ ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್​ ನಟನ ಸಿನಿಮಾಗೆ ವೀಕೆಂಡ್​ನಲ್ಲಿ ಇದು ಸಣ್ಣ ಮೊತ್ತ ಎನ್ನಲಾಗುತ್ತಿದೆ. ಸೋಮವಾರ ಕಲೆಕ್ಷನ್​ ಕುಸಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: Vikram Twitter Review: ಮುಂಜಾನೆಯೇ ‘ವಿಕ್ರಮ್​’ ಚಿತ್ರ ನೋಡಿ ‘ಮ್ಯಾಜಿಕ್​’ ಅಂತ ಹೊಗಳಿದ ಪ್ರೇಕ್ಷಕರು

‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾಗೆ ವಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ದಕ್ಷಿಣದಲ್ಲಿ ‘ವಿಕ್ರಮ್​’ ಮತ್ತು ‘ಮೇಜರ್​’ ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ. ಉತ್ತರ ಭಾರತದಲ್ಲಿ ಹಿಂದಿ ಪ್ರೇಕ್ಷಕರು ಕೂಡ ಈ ಸಿನಿಮಾಗಳನ್ನು ನೋಡಲು ಬಯಸುತ್ತಿದ್ದಾರೆ. ಹಾಗಾಗಿ ಕೆಲವು ಕಡೆಗಳಲ್ಲಿ ‘ಸಾಮ್ರಾಟ್​ ಪೃಥ್ವಿರಾಜ್​’ ಬದಲಿಗೆ ‘ವಿಕ್ರಮ್​’ ಮತ್ತು ‘ಮೇಜರ್​’ ಸಿನಿಮಾಗಳನ್ನು ಪ್ರದರ್ಶನ ಮಾಡುವಂತೆ ಜನರು ಕೇಳುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆದರೆ ಚಿತ್ರತಂಡಗಳಿಂದ ಯಾರೊಬ್ಬರೂ ಈ ಕುರಿತು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ

ಇನ್ನೊಂದು ಮೂಲದ ಪ್ರಕಾರ, ಈ ಮೂರು ಸಿನಿಮಾಗಳಿಂದ ಪರಸ್ಪರ ತೊಂದರೆ ಆಗಿಲ್ಲ. ಯಾಕೆಂದರೆ ಪ್ರತಿ ಸಿನಿಮಾದ ಕಥಾವಸ್ತು ಭಿನ್ನವಾಗಿದೆ. ಎಲ್ಲ ಚಿತ್ರವನ್ನೂ ಜನರು ನೋಡುತ್ತಿದ್ದಾರೆ ಎನ್ನಲಾಗಿದೆ. ಮುಂಬೈ ಅಟ್ಯಾಕ್​ ವೇಳೆ ಸಾವನ್ನಪ್ಪಿದ ವೀರ ಯೋಧ ಸಂದೀಪ್​ ಉನ್ನಿಕೃಷ್ಣನ್​ ಅವರ ಜೀವನವನ್ನು ಆಧರಿಸಿ ‘ಮೇಜರ್’​ ಸಿನಿಮಾ ಮೂಡಿಬಂದಿದೆ. ಈ ಸಿನಿಮಾದಲ್ಲಿ ಅಡಿವಿ ಶೇಷ್​ ಅವರು ಪ್ರಮುಖ ಪಾತ್ರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 9 minutes ago