Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಉಕ್ರೇನ್​ಗೆ ಭೇಟಿ ನೀಡುವ ಸಾಧ್ಯತೆ ಬಗ್ಗೆ ಆ ದೇಶದ ಅಧಿಕಾರಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಇಷ್ಟರಲ್ಲೇ ಚರ್ಚಿಸಲಿದ್ದಾರೆ | Pope Francis to soon discuss with Ukrainian authorities about his possible visit to war torn country ARB

Pope-Francis.jpg


ಉಕ್ರೇನ್​ಗೆ ಭೇಟಿ ನೀಡುವ ಸಾಧ್ಯತೆ ಬಗ್ಗೆ ಆ ದೇಶದ ಅಧಿಕಾರಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಇಷ್ಟರಲ್ಲೇ ಚರ್ಚಿಸಲಿದ್ದಾರೆ

ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಪರೋಕ್ಷವಾಗಿ ಅನೇಕ ಸಲ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಸಾರಿದ ಕ್ರಮವನ್ನು ಖಂಡಿಸಿರುವರಾದರೂ ಒಮ್ಮೆಯೂ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರು ಹಲವಾರು ಬಾರಿ ‘ಸಮರ್ಥನಿಯವಲ್ಲದ ಆಕ್ರಮಣ,’ ‘ಅತಿಕ್ರಮಣ’ ಮುಂತಾದ ಪದಗಳನ್ನು ಬಳಸಿದ್ದಾರೆ

Vatican City: ತಾವು ಉಕ್ರೇನ್ ಗೆ (Ukraine) ಭೇಟಿ ನೀಡುವ ಸಾಧ್ಯತೆ ಕುರಿತು ಆ ದೇಶದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಪೋಪ್ ಫ್ರಾನ್ಸಿಸ್ (Pope Francis) ಶನಿವಾರ ವ್ಯಾಟಿಕನ್ ಸಿಟಿಯಲ್ಲಿ (Vatican City) ಹೇಳಿದರು. ಇಲ್ಲಿನ ಮುಖ್ಯ ಪ್ರಾಂಗಣವೊಂದರಲ್ಲಿ ಮಕ್ಕಳೊಂದಿಗೆ ಶನಿವಾರ ನಡೆಸಿದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪೋಪ್ ಅವರು ಈ ಸಂಗತಿಯನ್ನು ಬಹಿರಂಗಪಡಿಸಿದರು.
ಸಾಚರ್ ಹೆಸರಿನ ಉಕ್ರೇನ್ ದೇಶದ ಒಬ್ಬ ಬಾಲಕ ಪೋಪ್ ಅವರಿಗೆ, ‘ನೀವು ಉಕ್ರೇನ್ ಗೆ ಬಂದು ಅಲ್ಲಿ ಭಯಂಕರ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳನ್ನು ರಕ್ಷಿಸುವಿರಾ?’ ಅಂತ ಪ್ರಶ್ನಿಸಿದ.

ಮೊಣಕಾಲಿನ ಸಮಸ್ಯೆಯ ಕಾರಣ ಓಡಾಡಲು ವ್ಹೀಲ್ ಚೇರ್ ಬಳಸುತ್ತಿರುವ 85-ವರ್ಷ-ವಯಸ್ಸಿನ ಪೋಪ್, ಉಕ್ರೇನ್ ಮಕ್ಕಳ ಬಗ್ಗೆ ತಾವು ಪದೇಪದೆ ಯೋಚಿಸುತ್ತಿರುವುದಾಗಿ ಹೇಳಿ ಅಲ್ಲಿಗೆ ಹೋಗುವ ಇಚ್ಛೆಯಿದ್ದು ಸೂಕ್ತ ಸಮಯಕ್ಕಾಗಿ ಎದುರು ನೋಡುತ್ತಿರುವುನೆಂದು ಬಾಲಕನಿಗೆ ಹೇಳಿದರು.

‘ವಿಶ್ವದ ಉಳಿದ ಭಾಗಕ್ಕೆ ಒಳಿತಿಗಿಂತ ಹೆಚ್ಚು ಹಾನಿಯನ್ನು ಉಂಟು ಮಾಡಬಹುದಾದ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಬಹಳ ಸೂಕ್ತವಾದ ಸಮಯದಲ್ಲ್ಲಿ ಅತ್ಯಂತ ಸಮರ್ಪಕವಾದ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ,’ ಎಂದು ಪೋಪ್ ಹೇಳಿದರು. ವ್ಯಾಟಿಕನ್ ಸಿಟಿಯಿಂದ ಲಭ್ಯವಾಗಿರುವ ವರದಿಯ ಪ್ರಕಾರ ಅವರು ಸದರಿ ವಿಷಯದ ಬಗ್ಗೆ ವಿಶದವಾಗಿ ಮಾತಾಡಲಿಲ್ಲ.

‘ಉಕ್ರೇನ್ ಸರ್ಕಾರದ ಪ್ರತಿನಿಧಿಗಳ ನಿಯೋಗವೊಂದು ನನ್ನೊಂದಿಗೆ ಮಾತುಕತೆ ನಡೆಸಲು ಇಲ್ಲಿಗೆ ಮುಂದಿನ ವಾರ ಬರಲಿದೆ. ನಾನು ಅಲ್ಲಿಗೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆಯೂ ಆಗ ಚರ್ಚಿಸಲಾಗುವುದು. ಮಾತುಕತೆಯಲ್ಲಿ ಏನಾಗುತ್ತೋ ನೋಡೋಣ,’ ಎಂದು ಪೋಪ್ ಹೇಳಿದರು. ಆದರೆ ಯಾವುದೇ ವಿವರಣೆ ಅವರು ನೀಡಲಿಲ್ಲ.

ಉಕ್ರೇನಲ್ಲಿ ಜಾರಿಯಲ್ಲಿರುವ ಯುದ್ಧದ ಹಿನ್ನೆಲೆಯಲ್ಲಿ ವ್ಯಾಟಿಕನ್ ಬಹಳ ಸೂಕ್ಷ್ಮವಾಗಿ ರಾಜತಾಂತ್ರಿಕ ಸಮತೋಲನದ ನಡೆಯನ್ನು ಜಾರಿಯಲ್ಲಿಡಬೇಕಾಗಿದೆ. ಯುದ್ಧವನ್ನು ಕೊನೆಗಾಣಿಸಲು ಅದು ಹಲವಾರು ಬಾರಿ ಮಧ್ಯವರ್ತಿಯಾಗಿ ನೆರವಾಗುವ ಪ್ರಸ್ತಾಪ ಮಾಡಿದೆ.

ಪೋಪ್ ಫ್ರಾನ್ಸಿಸ್ ಅವರು ಪರೋಕ್ಷವಾಗಿ ಅನೇಕ ಸಲ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಸಾರಿದ ಕ್ರಮವನ್ನು ಖಂಡಿಸಿರುವರಾದರೂ ಒಮ್ಮೆಯೂ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರು ಹಲವಾರು ಬಾರಿ ‘ಸಮರ್ಥನಿಯವಲ್ಲದ ಆಕ್ರಮಣ,’ ‘ಅತಿಕ್ರಮಣ’ ಮುಂತಾದ ಪದಗಳನ್ನು ಬಳಸಿದ್ದಾರೆ ಮತ್ತು ನಾಗರಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ, ಕೀವ್ ಪಟ್ಟಣದ ಮೇಯರ್ ವಿಟಾಲಿ ಕ್ಲಿಟ್ಸ್ಕೊ, ಉಕ್ರೇನ್‌ನ ಬೈಜಾಂಟೈನ್-ರೀಟ್ ಕ್ಯಾಥೋಲಿಕ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್ ಸ್ವಿಯಾಟೊಸ್ಲಾವ್ ಶೆವ್‌ಚುಕ್ ಮತ್ತು ವ್ಯಾಟಿಕನ್‌ಗೆ ಉಕ್ರೇನ್ ರಾಯಭಾರಿ ಆಂಡ್ರಿ ಯುರಾಶ್ ಮೊದಲಾದವರು ಪೋಪ್ ಫ್ರಾನ್ಸಿಸ್ ಅವರನ್ನು ಉಕ್ರೇನ್ ಗೆ ಆಹ್ವಾನಿಸಿದ್ದಾರೆ.

ಪೋಪ್ ಉಲ್ಲೇಖಿಸಿರುವ ಮೀಟಿಂಗ್ ಬಗ್ಗೆ ತನ್ನಲ್ಲಿ ಯಾವದೇ ವಿವರ ಇಲ್ಲವೆಂದು ಯುರಾಶ್ ಶನಿವಾರದಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 



Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 9 minutes ago