Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Prashanth Neel Birthday: ಸಾವಿರ ಕೋಟಿ ರೂ. ಬಿಸ್ನೆಸ್​ ಮಾಡಿಕೊಟ್ಟ ಪ್ರಶಾಂತ್​ ನೀಲ್​ಗೆ ಈ ವರ್ಷದ ಹುಟ್ಟುಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್​ | Prashanth Neel Birthday: This year birthday is very special for KGF Chapter 2 director Prashanth Neel

KGF-2-Director-Prashanth-Neel.jpg


Prashanth Neel Birthday: ಸಾವಿರ ಕೋಟಿ ರೂ. ಬಿಸ್ನೆಸ್​ ಮಾಡಿಕೊಟ್ಟ ಪ್ರಶಾಂತ್​ ನೀಲ್​ಗೆ ಈ ವರ್ಷದ ಹುಟ್ಟುಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್​

ಪ್ರಶಾಂತ್ ನೀಲ್

Happy Birthday Prashanth Neel: ಪ್ರಶಾಂತ್​ ನೀಲ್​ ಜನ್ಮದಿನಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಸ್ಟಾರ್​ ನಿರ್ದೇಶಕರ ಪಟ್ಟಿಯಲ್ಲಿ ಕನ್ನಡಿಗ ಪ್ರಶಾಂತ್​ ನೀಲ್​ (Prashanth Neel) ಕೂಡ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಅವರ ಜೊತೆ ಸಿನಿಮಾ ಮಾಡಲು ಅನೇಕ ಘಟಾನುಘಟಿ ನಟರೆಲ್ಲ ಕಾದಿದ್ದಾರೆ. ಅಂಥ ಬಹುಬೇಡಿಕೆಯ ನಿರ್ದೇಶಕನಿಗೆ ಇಂದು (ಜೂನ್​ 4) ಜನ್ಮದಿನದ ಸಂಭ್ರಮ. ಪ್ರಶಾಂತ್​ ನೀಲ್​ ಅವರ ಹುಟ್ಟುಹಬ್ಬದ (Prashanth Neel Birthday) ಪ್ರಯುಕ್ತ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಅವರಿಗೆ ವಿಶ್​ ಮಾಡುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಗೆಲುವಿನ ಬಳಿಕ ಪ್ರಶಾಂತ್​ ನೀಲ್​ ಅವರನ್ನು ಜನರು ನೋಡುವ ರೀತಿಯೇ ಬದಲಾಗಿದೆ. ಓರ್ವ ಮಾಂತ್ರಿಕನ ರೀತಿಯಲ್ಲಿ ಅವರು ಬಾಕ್ಸ್ ಆಫೀಸ್​ನಲ್ಲಿ ಮೋಡಿ ಮಾಡಿ ತೋರಿಸಿದ್ದಾರೆ. ಪರಭಾಷೆಯ ಮಂದಿಯೆಲ್ಲ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ಪ್ರಶಾಂತ್​ ನೀಲ್​ ಅವರಿಗೆ ಸಲ್ಲುತ್ತದೆ. ಈ ಬಾರಿಯ ಬರ್ತ್​ಡೇ ಅವರಿಗೆ ತುಂಬಾನೇ ಸ್ಪೆಷಲ್​. ಯಾಕೆಂದರೆ ‘ಕೆಜಿಎಫ್​ 2’ ಸಿನಿಮಾ ಮೂಲಕ ಅವರು 1200 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್​ ಮಾಡಿಕೊಟ್ಟು ಮಹಾನ್​ ಸಾಧನೆ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಇನ್ನೂ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಆ ಖುಷಿಯ ಜೊತೆಯಲ್ಲೇ ಪ್ರಶಾಂತ್​ ನೀಲ್​ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮಾಡಿದ ಸಾಧನೆ ಸಣ್ಣದಲ್ಲ. ಇಡೀ ಭಾರತೀಯ ಚಿತ್ರರಂಗವೇ ಪ್ರಶಾಂತ್ ನೀಲ್​ ಕಾರ್ಯವನ್ನು ಕೊಂಡಾಡುತ್ತಿದೆ. ಬಾಲಿವುಡ್​ ಮಂದಿಗೂ ಭಯ ಹುಟ್ಟಿಸುವ ರೀತಿಯಲ್ಲಿ ಕನ್ನಡದ ಈ ಸಿನಿಮಾ ಗೆದ್ದು ತೋರಿಸಿದೆ. ಕ್ಯಾಪ್ಟನ್​ ಆಫ್​ ದಿ ಶಿಪ್​ ಆಗಿರುವ ಪ್ರಶಾಂತ್​ ನೀಲ್​ ಅವರಿಗೆ ಈ ಗೆಲುವಿನ ಕ್ರೆಡಿಟ್​ ಸಲ್ಲಬೇಕು. ಈಗ ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಕೂಡ ಈ ಸಿನಿಮಾ ಪ್ರಸಾರ ಆಗುತ್ತಿದೆ. ಒಟ್ಟಿನಲ್ಲಿ ಎಲ್ಲೆಲ್ಲೂ ಪ್ರಶಾಂತ್​ ನೀಲ್​ ಅವರ ಗುಣಗಾನ ಮಾಡಲಾಗುತ್ತಿದೆ.

ಇದನ್ನೂ ಓದಿ: ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್​ ನೀಲ್​? ಇಂಥ ಗಾಸಿಪ್​ ಹರಡಲು ಕಾರಣ ಇಲ್ಲಿದೆ..

ಒಂದು ಸಿನಿಮಾ ಮೂಲಕ ಗೆಲುವು ಪಡೆದು ಜನರ ಅಭಿಮಾನ ಗಳಿಸುವುದು ಎಷ್ಟು ಮುಖ್ಯವೋ ಆ ಅಭಿಮಾನವನ್ನು ಉಳಿಸಿಕೊಂಡು ಹೋಗುವುದು ಅದಕ್ಕಿಂತಲೂ ಹೆಚ್ಚು ಮುಖ್ಯ. ಹಾಗಾಗಿ ಪ್ರಶಾಂತ್​ ನೀಲ್ ಅವರು ಮುಂಬರುವ ಸಿನಿಮಾಗಳ ಮೇಲೆ ಹೆಚ್ಚು ಶ್ರಮ ಹಾಕಬೇಕಿದೆ. ಈಗ ಅವರು ಪ್ರಭಾಸ್​ ಜೊತೆ ‘ಸಲಾರ್​’ ಸಿನಿಮಾ ಮಾಡುತ್ತಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್​’ ಮೂಲಕ ಸೋಲುಂಡಿರುವ ಪ್ರಭಾಸ್​ಗೆ ಗೆಲುವು ಕೊಡಿಸುವ ದೊಡ್ಡ ಜವಾಬ್ದಾರಿ ಪ್ರಶಾಂತ್ ನೀಲ್​ ಹೆಗಲ ಮೇಲಿದೆ.

ಇದನ್ನೂ ಓದಿ: ಕಮಲ್​ ಹಾಸನ್ ಜೊತೆ ಪ್ರಶಾಂತ್​ ನೀಲ್​ ಸಿನಿಮಾ? ಹೈ-ವೋಲ್ಟೇಜ್​ ಕಾಂಬಿನೇಷನ್​ ಬಗ್ಗೆ ಹೊಸ ಗುಸುಗುಸು

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರಲ್ಲಿ ಪ್ರಶಾಂತ್​ ನೀಲ್​ ಕೂಡ ಒಬ್ಬರಾಗಿದ್ದಾರೆ. ಮುಂಬರುವ ಸಿನಿಮಾಗಳಿಗೆ ಅವರು ಬಹುಕೋಟಿ ರೂಪಾಯಿ ಸಂಬಳ ಪಡೆಯಲಿದ್ದಾರೆ. ಇತ್ತೀಚೆಗಷ್ಟೇ ಅವರು ಜ್ಯೂ. ಎನ್​ಟಿಆರ್​ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಪ್ರಾಜೆಕ್ಟ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇನ್ನು, ‘ಕೆಜಿಎಫ್​ 3’ ಯಾವಾಗ ಸೆಟ್ಟೇರಲಿದೆ ಎಂಬ ಕೌತುಕ ಕೂಡ ಅಭಿಮಾನಿಗಳ ಮನದಲ್ಲಿ ಮೂಡಿದೆ.

ಇದನ್ನೂ ಓದಿ: 3 ಚಿತ್ರಗಳ ಪೋಸ್ಟರ್​ ಒಟ್ಟಿಗೆ ಜೋಡಿಸಿದ ಪ್ರಶಾಂತ್​ ನೀಲ್​; ಫ್ಯಾನ್ಸ್​ ತಲೆಯಲ್ಲಿ ಮೂಡಿದೆ ದೊಡ್ಡ ಪ್ರಶ್ನೆ

ಎಷ್ಟೋ ಮಂದಿ ಯುವ ನಿರ್ದೇಶಕರಿಗೆ ಪ್ರಶಾಂತ್​ ನೀಲ್​ ಮಾದರಿ ಆಗಿದ್ದಾರೆ. ಮೇಕಿಂಗ್​ ವಿಚಾರದಲ್ಲಿ ಅವರನ್ನು ನೋಡಿ ಇತರರು ಕಲಿಯುವುದು ಸಾಕಷ್ಟಿದೆ. ‘ಹೊಂಬಾಳೆ ಫಿಲ್ಮ್ಸ್​’, ‘ಮೈತ್ರಿ ಮೂವೀ ಮೇಕರ್ಸ್​’ ಮುಂತಾದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಪ್ರಶಾಂತ್​ ನೀಲ್​ ಜನ್ಮದಿನಕ್ಕೆ ಶುಭ ಕೋರುತ್ತಿವೆ. ಕನ್ನಡ ಚಿತ್ರರಂಗಕ್ಕೆ ಅವರು ಇನ್ನಷ್ಟು ಕೊಡುಗೆ ನೀಡುವಂತಾಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,591,112
Recovered
0
Deaths
528,655
Last updated: 2 minutes ago