Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ? ಒಳ್ಳೆಯದಾ ಕೆಟ್ಟದಾ? | What does it mean to have dreams about snakes in kannada

Snake.jpg


ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ? ಒಳ್ಳೆಯದಾ ಕೆಟ್ಟದಾ?

ಸಾಂದರ್ಭಿಕ ಚಿತ್ರ

ಕೆಲವರು ಹಾವುಗಳಿಗೆ ಸಂಬಂಧಿಸಿದ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಿದರೆ, ಕೆಲವರು ಅಶುಭವೆಂದು ನಂಬುತ್ತಾರೆ. ಹೀಗಾಗಿ ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ ಎಂದು ಈ ಆರ್ಟಿಕಲ್ ನಲ್ಲಿ ತಿಳಿಸಲಾಗಿದೆ.

ಪ್ರತಿಯೊಬ್ಬ ವ್ಯಕ್ತಿಯು ರಾತ್ರಿ ಮಲಗಿದ್ದಾಗ ಕನಸು ಕಾಣುವುದು ಸಹಜ. ಆದ್ರೆ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಈ ಕನಸುಗಳು ಭವಿಷ್ಯದಲ್ಲಿ ನಡೆಯುವ ಅಥವಾ ಮುಂಬರುವ ಸಮಸ್ಯೆ, ಶುಭಗಳ ಮುಂಸೂಚನೆಯಾಗಿರುತ್ತೆ. ಹೀಗಾಗಿ ಯಾವ ಕನಸುಗಳನ್ನೂ ನಾವು ಕಡೆಗಣಿಸುವಂತಿಲ್ಲ. ಅದರಲ್ಲೂ ಪದೇ ಪದೇ ಬರುವ ಕನಸುಗಳು ಮಹತ್ತರ ಸಂದೇಶವನ್ನು ಹೇಳಲು ಬಯಸುತ್ತಿರುತ್ತವೆ. ಕೆಲವರು ಹಾವುಗಳಿಗೆ ಸಂಬಂಧಿಸಿದ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಿದರೆ, ಕೆಲವರು ಅಶುಭವೆಂದು ನಂಬುತ್ತಾರೆ. ಹೀಗಾಗಿ ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ ಎಂದು ಈ ಆರ್ಟಿಕಲ್ ನಲ್ಲಿ ತಿಳಿಸಲಾಗಿದೆ.

ಕನಸಿನಲ್ಲಿ ಹಾವು ದಾಳಿ ಮಾಡಿದರೆ ಏನರ್ಥ
ಸ್ವಪ್ನ ಶಾಸ್ತ್ರವು ಒಂದು ಅದ್ಭುತ ಶಾಸ್ತ್ರ. ಇದರಲ್ಲಿ ಮನುಷ್ಯನಿಗೆ ಬೀಳುವ ಕನಸಿನ ಅರ್ಥವನ್ನು ತಿಳಿಸಲಾಗಿದೆ. ಈ ಸ್ವಪ್ನ ಶಾಸ್ತ್ರದ ಪ್ರಕಾರ, ಹಾವು ನಿಮ್ಮ ಕನಸಿನಲ್ಲಿ ದಾಳಿ ಮಾಡಿದರೆ ಅಥವಾ ಬೇರೆಯವರ ಮೇಲೆ ಆಕ್ರಮಣ ಮಾಡಿದಂತೆ ಕಂಡು ಬಂದರೆ ಅದು ನಿಮ್ಮ ಜೀವನದಲ್ಲಿ ಬರುವ ದೊಡ್ಡ ತೊಂದರೆಗಳ ಸಂಕೇತವಾಗಿದೆ. ಇನ್ನು ಹಾವು, ಮುಂಗುಸಿಗಳ ಹೋರಾಟವು ಕನಸಿನಲ್ಲಿ ಬಂದರೆ ಅದು ನಿಮ್ಮ ಜೀವನದಲ್ಲಿ ಎದುರಾಗಬಹುದಾದ ಕಾನೂನು ತೊಂದರೆಗಳ ಸಂಕೇತವಾಗಿದೆ ಎಂದು ನಂಬಲಾಗಿದೆ.

ಕನಸಲ್ಲಿ ಜೋಡಿ ಹಾವು ಕಂಡರೆ ಏನರ್ಥ
ಕನಸಿನಲ್ಲಿ ಜೋಡಿ ಹಾವು ಮತ್ತು ಸರ್ಪ ಕಾಣಿಸಿಕೊಂಡರೆ ಅದು ಅಶುಭದ ಸಂಕೇತ. ಪಿತೃಗಳ ಕೋಪದಿಂದ ಈ ಕನಸು ಬರುತ್ತದೆ ಎನ್ನುವ ನಂಬಿಕೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ನಾವು, ಎಂದಿಗೂ ಪೂರ್ವಜರ ಕಡೆಗೆ ತಪ್ಪು ಆಲೋಚನೆಗಳನ್ನು ಮಾಡಬಾರದು ಮತ್ತು ಇಂತಹ ಕನಸು ಕಂಡಾಗಲೆಲ್ಲಾ ಆ ದಿನದಿಂದ ಪೂರ್ವಜರ ಹೆಸರಿನಲ್ಲಿ ದೀಪ ಬೆಳಗಬೇಕು.

ಕನಸಿನಲ್ಲಿ ಹಾವು ಕಚ್ಚಿದರೆ ಏನರ್ಥ
ಕನಸಿನಲ್ಲಿ ಹಾವು ಕಚ್ಚಿ ಇಡೀ ದೇಹವು ವಿಷದಿಂದ ಕೂಡಿರುವಂತೆ ಭಾಸವಾದ್ರೆ ಅದರ ಅರ್ಥ ನೀವು ಯಾವುದೋ ಕೆಟ್ಟ ವ್ಯಕ್ತಿಯೊಡನೆ ಸಂಬಂಧವನ್ನು ಬೆಳೆಸಿದ್ದೀರಿ ಎಂದು. ನೀವು ಯಾವುದಾದರೂ ಓರ್ವ ಕೆಟ್ಟ ವ್ಯಕ್ತಿಯೊಡನೆ ಅಥವಾ ನಿಮಗೆ ಕೆಟ್ಟದ್ದನ್ನೇ ಬಯಸುವ ವ್ಯಕ್ತಿಯೊಡನೆ ಸ್ನೇಹವನ್ನು ಬೆಳೆಸಿದ್ದರೆ ನಿಮಗೆ ಈ ರೀತಿಯಾಗಿ ಕನಸು ಬೀಳುತ್ತದೆ.

ಕನಸಿನಲ್ಲಿ ಹುತ್ತದಿಂದ ಹಾವು ಹೊರಬರುವಂತಾದ್ರೆ?
ಕನಸಿನಲ್ಲಿ ಉದ್ದವಾದ ಅಥವಾ ಹುತ್ತದಿಂದ ಹಾವು ಬರುತ್ತಿರುವುದನ್ನು ನೋಡಿದರೆ ಅದು ಮುಂಬರುವ ಕೆಲವು ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂಬ ಸೂಚನೆ. ಹುತ್ತದಿಂದ ಹಾವು ಹೊರಬರುವುದನ್ನು ನೋಡಿದರೆ, ಜನರು ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬಹುದು ಎಂದರ್ಥ.

ಹಾವು ಮೇಲಿಂದ ಬೀಳುತ್ತಿರುವುದು ಕಂಡುಬಂದರೆ ಜಾಗರೂಕರಾಗಿರಿ
ಕನಸಿನಲ್ಲಿ ಹಾವು ಮೇಲಿನಿಂದ ಬೀಳುವುದನ್ನು ನೋಡಿದರೆ ಅದು ಒಳ್ಳೆಯ ಸಂಕೇತವಲ್ಲ. ಈ ಕನಸು ಮುಂಬರುವ ಸಮಯದಲ್ಲಿ ಕೆಲವು ಗಂಭೀರ ಅನಾರೋಗ್ಯದ ಸಂಕೇತವಾಗಿದೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಕನಸು ಕಂಡಾಗಲೆಲ್ಲಾ, ತಕ್ಷಣವೇ ಭಗವಾನ್‌ ಶಿವನನ್ನು ನೆನಪಿಸಿಕೊಳ್ಳುವುದು ಮತ್ತು ‘ಓಂ ನಮಃ ಶಿವಾಯ’ ಎನ್ನುವ ಮಂತ್ರವನ್ನು 11, 21, 51 ಮತ್ತು 101 ಬಾರಿ ಜಪಿಸುವುದು ಅವಶ್ಯಕ. ಇದು ನಿಮ್ಮ ಕನಸುಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಹಾವಿನ ಶುಭ ಸ್ವಪ್ನಗಳು
ಹಾವು ದೇವಸ್ಥಾನದಲ್ಲಿರುವಂತೆ ಕನಸಿನಲ್ಲಿ ಕಂಡರೆ ಇದರ ಅರ್ಥ ಕೆಲ ದಿನಗಳಲ್ಲಿ ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು. ಹಾವು ಮರದ ಮೇಲೆ ಹತ್ತುತ್ತಿರುವಂತೆ ಕನಸಿನಲ್ಲಿ ಕಂಡರೆ ಮುಂಬರುವ ದಿನಗಳಲ್ಲಿ ಬರಬೇಕಿದ್ದ ಹಣ ವಾಪಸ್ ಬರುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ. ಸ್ವಪ್ನದಲ್ಲಿ ಹಾವು ಶಿವಲಿಂಗವನ್ನು ಸುತ್ತಿಕೊಂಡಿರುವಂತೆ ಕಂಡರೆ ನಿಮ್ಮ ಮೇಲೆ ಸದಾಶಿವನ ಕೃಪೆ ಇದೆ ಎಂದರ್ಥ. ಅಷ್ಟೇ ಅಲ್ಲದೆ ಮಾಡುವ ಕೆಲಸಗಳಲ್ಲಿ ಸಫಲತೆ ಸಿಗುತ್ತದೆ. ಶ್ವೇತ ವರ್ಣದ ಸರ್ಪವನ್ನು ಅಥವಾ ಹಾವನ್ನು ನೋಡಿದರೆ ಶುಭವೆಂದು ಹೇಳಲಾಗುತ್ತದೆ.

ಇದನ್ನೂ ಓದಿ: Snakes Village: ಮನುಷ್ಯರೊಂದಿಗೆ ಹಾವುಗಳು ವಾಸಿಸುವ ಸ್ಥಳ ಯಾವುದು ಗೊತ್ತಾ..! ಇಲ್ಲಿದೆ ಕುತೂಹಲಕಾರಿ ಸಂಗತಿ



Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 8 minutes ago