Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

IPL 2022: ಮೇ 29 ರಂದು ಅಹಮದಾಬಾದ್​ನಲ್ಲಿ ಫೈನಲ್! ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ | BCCI announce IPL 2022 play off venue Ahmedabad host final on 29 May

IPL-2022.jpg


IPL 2022: ಮೇ 29 ರಂದು ಅಹಮದಾಬಾದ್​ನಲ್ಲಿ ಫೈನಲ್! ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಪ್ರಾತಿನಿಧಿಕ ಚಿತ್ರ

IPL 2022 ರ ಪ್ಲೇ-ಆಫ್ ಪಂದ್ಯಗಳ ದಿನಾಂಕಗಳನ್ನು ಬಿಸಿಸಿಐ ಪ್ರಕಟಿಸಿದೆ. ದಿನಾಂಕಗಳ ಜೊತೆಗೆ, ಅದರ ಸ್ಥಳವನ್ನು ಸಹ ಬಹಿರಂಗಗೊಳಿಸಿದೆ. ಅಂದರೆ 15ನೇ ಋತುವಿನ ಪ್ಲೇ-ಆಫ್ ಪಂದ್ಯಗಳನ್ನು ಎಲ್ಲಿ ಮತ್ತು ಯಾವಾಗ ಆಡಲಾಗುತ್ತದೆ? ಫೈನಲ್ ಪಂದ್ಯ ಎಲ್ಲಿ? ಎಂಬುದನ್ನು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಿದೆ. ಐಪಿಎಲ್ 2022 ರ ಪ್ಲೇ-ಆಫ್‌ ಪಂದ್ಯಗಳು ಮತ್ತು ಅಂತಿಮ ಪಂದ್ಯಗಳ ದಿನಾಂಕ ಮತ್ತು ಸ್ಥಳದ ಕುರಿತು ಅಂತಿಮ ನಿರ್ಧಾರವನ್ನು ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಬಿಸಿಸಿಐ ಪ್ಲೇಆಫ್ ಪಂದ್ಯಗಳಿಗಾಗಿ 6 ದಿನಗಳ ಕಾರ್ಯಕ್ರಮವನ್ನು ಸಿದ್ದಪಡಿಸಿದೆ. ಇದರಲ್ಲಿ ಕೋಲ್ಕತ್ತಾ ಹಾಗೂ ಅಹಮದಾಬಾದ್​ನಲ್ಲಿ 4 ಪಂದ್ಯಗಳನ್ನು ಆಡಲಾಗುತ್ತದೆ. ಈ 6 ದಿನಗಳ ಕಾರ್ಯಕ್ರಮದ ನಂತರವೇ ಐಪಿಎಲ್‌ನ ಹೊಸ ಚಾಂಪಿಯನ್ ವಿಶ್ವದ ಮುಂದೆ ಬರಲಿದೆ.

ಐಪಿಎಲ್ 2022ರ ಪ್ಲೇಆಫ್ ಪಂದ್ಯಗಳು ಕೇವಲ ಎರಡು ನಗರಗಳಲ್ಲಿ ಮಾತ್ರ ನಡೆಯಲಿವೆ. ಈ ಎರಡು ನಗರಗಳನ್ನು ಕೋಲ್ಕತ್ತಾ ಮತ್ತು ಅಹಮದಾಬಾದ್ ಎಂದು ಆಯ್ಕೆ ಮಾಡಲಾಗಿದೆ. ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಜೊತೆಗೆ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಕೋಲ್ಕತ್ತಾದಲ್ಲಿ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್
ಯಾವ ಪಂದ್ಯಗಳು ಯಾವಾಗ ಮತ್ತು ಯಾವ ಮೈದಾನದಲ್ಲಿ ನಡೆಯುತ್ತವೆ ಎಂಬುದರ ಬಗ್ಗೆ ಹೇಳಬೇಕೆಂದರೆ. IPL 2022 ಪ್ಲೇಆಫ್‌ಗೂ ಮೊದಲ ಕ್ವಾಲಿಫೈಯರ್ ಮೇ 24 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಮೇ 26 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದು ಕೂಡ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಎಲಿಮಿನೇಟರ್‌ನಲ್ಲಿ ಸೋತ ತಂಡದ ಪಯಣ ಟೂರ್ನಿಯಲ್ಲಿ ಸ್ಥಗಿತಗೊಳ್ಳಲಿದೆ. ಅದೇ ಸಮಯದಲ್ಲಿ, ವಿಜೇತ ತಂಡವು ಎರಡನೇ ಕ್ವಾಲಿಫೈಯರ್ ಆಡುವ ಅವಕಾಶವನ್ನು ಪಡೆಯುತ್ತದೆ.

ಅಹಮದಾಬಾದ್‌ನಲ್ಲಿ ಐಪಿಎಲ್ 2022 ಫೈನಲ್
ಎರಡನೇ ಕ್ವಾಲಿಫೈಯರ್‌ನಲ್ಲಿ ಎಲಿಮಿನೇಟರ್ ಗೆದ್ದ ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡವನ್ನು ಎದುರಿಸಲಿದೆ. ಐಪಿಎಲ್ 2022 ರ ಎರಡನೇ ಕ್ವಾಲಿಫೈಯರ್ ಪಂದ್ಯವು ಮೇ 27 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಹೋಗಲಿದ್ದು, ಅಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ. ಐಪಿಎಲ್ 2022 ರ ಅಂತಿಮ ಪಂದ್ಯವು ಮೇ 29 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 6 minutes ago