Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಸಂತೋಷ್ ಮನೆಯಲ್ಲಿ ಆಕ್ರಂದನ: ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ ಎಂದ ತಾಯಿ, ಇದು ಕೊಲೆ ಎಂದ ಪತ್ನಿ | Police begins Investigation in Santhosh Patil Suicide Case mother Alleges Eshwarappa is reason for suicide

Santhosh-Wife.jpg


ಸಂತೋಷ್ ಮನೆಯಲ್ಲಿ ಆಕ್ರಂದನ: ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ ಎಂದ ತಾಯಿ, ಇದು ಕೊಲೆ ಎಂದ ಪತ್ನಿ

ಸಂತೋಷ್ ಪತ್ನಿ ಜಯಶ್ರೀ ಅವರನ್ನು ಸಂತೈಸುತ್ತಿರುವ ಕುಟುಂಬದ ಸದಸ್ಯರು

ಬೆಳಗಾವಿ: ಸಂತೋಷ್ ಸಾವಿನ ಸುದ್ದಿ ತಿಳಿದ ನಂತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಅವರ ಶಂಕಿತ ಸಾವಿನ ಕುರಿತು ಪ್ರತಿಕ್ರಿಯಿಸಿರುವ ತಾಯಿ ಪಾರ್ವತಿ, ‘ಮಗ ಆತ್ಮಹತ್ಯೆ ಮಾಡಿಕೊಳ್ಳುವಂಥವನಲ್ಲ’ ಎಂದಿದ್ದಾರೆ. ವಿಜಯನಗರದಲ್ಲಿರುವ ಸಂತೋಷ್ ಮನೆಯಲ್ಲಿ ಮೃತ ಸಂತೋಷ್​ ಅವರ ತಾಯಿ ಪಾರ್ವತಿ, ಪತ್ನಿ ಜಯಶ್ರೀ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ಮನೆಯ ಎದುರು ಗೆಳೆಯರು ಮತ್ತು ಸಂಬಂಧಿಗಳು ನೆರೆದಿದ್ದು ನೀರವ ಮೌನ ನೆಲೆಸಿದೆ.

ನನ್ನ ಮಗ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ ಎಂದು ಟಿವಿ9ಗೆ ಸಂತೋಷ್ ಪಾಟೀಲ್ ತಾಯಿ ಪಾರ್ವತಿ ಹೇಳಿಕೆ ನೀಡಿದರು. ಮಗನ ಸಾವಿಗೆ ಸಚಿವ ಈಶ್ವರಪ್ಪ ಕಾರಣ. ಅವರ ಮಾತಿನಂತೆಯೇ ಮಗ ಕಾಮಗಾರಿ ಮಾಡಿಸಿದ್ದ. ಕಾಮಗಾರಿ ಮಾಡಿದ್ದನ್ನು ಸಚಿವ ನೋಡಬೇಕಿತ್ತು. ಚಿಕ್ಕವರು ಬಂದಾಗ ಏನು ಕೇಳುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕಿತ್ತು. ಅವ್ರು 40 ಪರ್ಸೆಂಟ್ ಕಮಿಷನ್ ಕೇಳದಿದ್ದರೆ ನನ್ನ ಮಗ ಉಳಿಯುತ್ತಿದ್ದ ಎಂದು ಸಂತೋಷನ ತಾಯಿ ಪಾರ್ವತಿ ಟಿವಿ9ಗೆ ಪ್ರತಿಕ್ರಿಯಿಸಿದರು.

ಬರ್ತೀನಿ ಎಂದು ಹೇಳಿಯೇ ಸಂತೋಷ ಮನೆಯಿಂದ ಹೊರಗೆ ಹೋಗಿದ್ದ. ಅವನು ಆತ್ಮಹತ್ಯೆ ಮಾಡಿಕೊಳ್ಳುವಂಥವನಲ್ಲ. ನನ್ನ ಮಗನನ್ನು ನನಗೆ ತಂದುಕೊಡಿ. ಕೆಲಸ ಮಾಡಿಸಿದ್ದರ ಬಗ್ಗೆಯೂ ಹೇಳಿಕೊಂಡಿದ್ದ. ನನ್ನನ್ನು ಭೇಟಿಯಾದಾಗಲೆಲ್ಲಾ ಅದರ ಬಗ್ಗೆ ಮಾತನಾಡುತ್ತಿದ್ದ. ‘ಬಿಲ್ ಬರುತ್ತೆ ಮಮ್ಮಿ’ ಎಂದಿದ್ದ. ನನ್ನ ಗಮನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ನೇರ ಆರೋಪ ಮಾಡಿದರು. ಸಂತೋಷ್ ಅವರ ಪತ್ನಿ ಜಯಶ್ರೀ ಸಹ ‘ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಇದು ಕೊಲೆ. ಅವರ ಸಾವಿಗೆ ಈಶ್ವರಪ್ಪ ಕಾರಣ’ ಎಂದು ಆರೋಪಿಸಿದರು.

ಪಂಚನಾಮೆ ಪ್ರಕ್ರಿಯೆ ಆರಂಭ

ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವಿನ ತನಿಖೆ ಆರಂಭವಾಗಿದೆ. ತನಿಖೆಯ ಮೊದಲ ಹಂತವಾಗಿ ಪೊಲೀಸರು ಉಡುಪಿಯ ಖಾಸಗಿ ಹೊಟೆಲ್​ನಲ್ಲಿ ಪಂಚನಾಮೆ ಪ್ರಕ್ರಿಯೆಗೆ ಚಾಲನೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಸಂತೋಷ್ ಅವರ ಪಾರ್ಥಿವ ಶರೀರವು ಹಾಸಿಗೆ ಮೇಲೆ ಮಲಗಿರುವಂತೆಯೇ ಇದೆ. ಹಸಿರು ಶರ್ಟ್, ಪ್ಯಾಂಟ್, ಕೇಸರಿ ಶಾಲು ಹಾಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಕೊಠಡಿಯ ಡಸ್ಟ್‌ಬಿನ್​​ನಲ್ಲಿ ವಿಷದ ಬಾಟಲಿ ರೀತಿಯ ಡಬ್ಬಿ ಪತ್ತೆಯಾಗಿದೆ. ಶವ ಶೀಘ್ರ ಕೊಳೆಯಬಾರದು ಎನ್ನುವ ಕಾರಣಕ್ಕೆ ಹೊಟೆಲ್ ಸಿಬ್ಬಂದಿ ಎಸಿ ಮೂಲಕ ರೂಂ ಟೆಂಪರೇಚರ್ ಅತ್ಯಂತ ಕನಿಷ್ಠ ಮಟ್ಟಕ್ಕೆ ತಂದಿದ್ದಾರೆ.

ಇದನ್ನೂ ಓದಿ: ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವು ಪ್ರಕರಣ: ಈಶ್ವರಪ್ಪ ಆರೋಪಿ ನಂ 1, ಎಫ್​ಐಆರ್ ದಾಖಲು

ಇದನ್ನೂ ಓದಿ: ಸಂತೋಷ್ ಸಾವು ಪ್ರಕರಣ: ಪ್ರಾಥಮಿಕ ವರದಿ ಸಿಕ್ಕ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಎಂದರು ಮುಖ್ಯಮಂತ್ರಿ ಬೊಮ್ಮಾಯಿ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 16 seconds ago