Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಶಾಲೆಯಲ್ಲೇ ಆರು ವರ್ಷದ ಬಾಲಕಿ ಮೇಲೆ ರೇಪ್: ಇಂದಿರಾನಗರದ ಶಿಕ್ಷಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ | Physical assault on 6 year old school girl in indiranagar bangalore teacher sent to 20 years jail term

Capt-1.jpg


ಶಾಲೆಯಲ್ಲೇ ಆರು ವರ್ಷದ ಬಾಲಕಿ ಮೇಲೆ ರೇಪ್: ಇಂದಿರಾನಗರದ ಶಿಕ್ಷಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಶಾಲೆಯಲ್ಲೇ ಆರು ವರ್ಷದ ಬಾಲಕಿ ಮೇಲೆ ರೇಪ್: ಇಂದಿರಾನಗರದ ಶಿಕ್ಷಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಬೆಂಗಳೂರು: ಶಾಲೆ ಆವರಣದಲ್ಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಸಾಬೀತಾದ ಹಿನ್ನೆಲೆಯಲ್ಲಿ ಇಂದಿರಾನಗರದ ಖಾಸಗಿ ಶಾಲೆಯೊಂದರ ಶಿಕ್ಷಕನಿಗೆ ಬೆಂಗಳೂರು ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಇಂದಿರಾನಗರದ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಬೋಧಿಸುತ್ತಿದ್ದ ಹಳೆ ತಿಪ್ಪಸಂದ್ರ ನಿವಾಸಿ ಜಯಶಂಕರ್ (46) ಎಂಬ ಶಿಕ್ಷಕನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈತನ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.

2014ರ ಅಕ್ಟೋಬರ್ 28 ರಂದು ಶಾಲೆಯಿಂದ ಮನೆಗೆ ಮರಳಿದ್ದ ಬಾಲಕಿ ತನ್ನ ಖಾಸಗಿ ಭಾಗಗಳಲ್ಲಿ ನೋವಾಗುತ್ತಿರುವ ಬಗ್ಗೆ ತನ್ನ ತಾಯಿಗೆ ಹೇಳಿಕೊಂಡಿದ್ದಳು. ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು. ಘಟನೆ ನಡೆದ ಮರುದಿನ ಮಗುವಿನ ತಾಯಿ ಶಾಲೆಗೆ ತೆರಳಿ, ಈ ಬಗ್ಗೆ ಶಿಕ್ಷಕರಿಂದ ವಿವರಣೆ ಕೇಳಿದ್ದರು. ಆದರೆ ಶಾಲಾ ಸಿಬ್ಬಂದಿ ಸೂಕ್ತವಾಗಿ ಪ್ರತಿಕ್ರಿಯಿಸಿರಲಿಲ್ಲ.

ಬಳಿಕ ತಾಯಿ ಘಟನೆ ಕುರಿತಂತೆ ಜೀವನ್ ಬಿಮಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ (Sec 376 of IPC relates to rape and Sections 4 and 6 of POCSO Act) ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು 2014ರ ಅಕ್ಟೋಬರ್ 30 ರಂದು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿ ಶಿಕ್ಷಕ (Jayashankar) ಬಾಲಕಿಯನ್ನು ಮಧ್ಯಾಹ್ನದ ಊಟದ ವೇಳೆ ಶಾಲೆಯ ಶೌಚಾಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿತ್ತು.
ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕ ಕೆವಿ ಅಶ್ಚತ್ಥನಾರಾಯಣ ವಾದ ಮಂಡಿಸಿದ್ದರು.

ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಮಾಜಿ ಯೋಧನ ಬಂಧಿಸಿದ ಎಚ್ಎಎಲ್ ಪೊಲೀಸರು
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಏರ್ ಫೈರಿಂಗ್ ಮಾಡಿದ್ದ ಮಾಜಿ ಯೋಧರೊಬ್ಬರನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಕುಮಾರ್ ಪಾಂಡೆ ಬಂಧಿತ ನಿವೃತ್ತ ಯೋಧ. ಶುಕ್ರವಾರ ಹೆಚ್ಎಎಲ್ ನ ಆನಂದ ರಾಮ್ ರೆಡ್ಡಿ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆರೋಪಿ ರಾಜೇಶ್ ಕುಮಾರ್ ಪಾಂಡೆ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿಗಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಕಂಪನಿ ಸಿಬ್ಬಂದಿಗೆ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮ್ಯೂಸಿಕ್ ಸೌಂಡ್ ಅತಿಯಾಗಿದ್ದ ಹಿನ್ನೆಲೆ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಉಂಟಾಗಿತ್ತು. ಸೌಂಡ್ ಕಡಿಮೆ ಮಾಡುವಂತೆ ಸಮೀಪದ ಅಪಾರ್ಟ್ಮೆಂಟ್ ನಿವಾಸಿ ಸತೀಶ್ ರೆಡ್ಡಿ ಮನವಿ ಮಾಡಲು ಹೋಗಿದ್ದರು. ಈ ವೇಳೆ ಗಲಾಟೆ ಮಾಡಲು ಬಂದಿದ್ದಾರೆ ಎಂದು ನಿವೃತ ಯೋಧನಿಂದ ಫೈರಿಂಗ್ ನಡೆದಿದೆ. ಸತೀಶ್ ರೆಡ್ಡಿ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಹಳ್ಳಿ ರಸ್ತೆಗಾಗಿ ಎಷ್ಟೇ ಮನವಿ ಮಾಡಿದರೂ ಡೋಂಟ್ ಕೇರ್, ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರಿಂದ ತರಾಟೆ
ಗದಗ: ಮುಂಡರಗಿ ತಾಲೂಕಿನ ಶಿರೋಳ ಗ್ರಾಮದಲ್ಲಿ (Shirol village) ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದ ರಸ್ತೆ ಮಾಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದದರೂ ಸ್ಪಂದಿಸದ ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.

ನಡುರಸ್ತೆಯಲ್ಲೇ ಶಾಸಕರ ಕಾರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ ಗ್ರಾಮಸ್ಥರು. ರಾಮಣ್ಣ ಲಮಾಣಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಗ್ರಾಮಕ್ಕೆ ಆಗಮಿಸಿದ್ದ ಶಾಸಕ ರಾಮಣ್ಣ ಲಮಾಣಿಗೆ (Shirahatti BJP MLA Ramanna Lamani) ದಿಗ್ಭಂಧನ ಹಾಕಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಆ ವೇಳೆ ರೈತರ ಆಕ್ರೋಶಕ್ಕೆ ಶಾಸಕ ರಾಮಣ್ಣ ತಡಬಡಾಯಿಸಿದ್ದಾರೆ. ಕೆಲಸ ಮಾಡ್ತಿರೋ, ಇಲ್ವೋ ಅಂತ ಶಾಸಕ ರಾಮಣ್ಣಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:
ಯಡಿಯೂರಪ್ಪರನ್ನು ಹಾಡಿಹೊಗಳಿದ ಕಾಂಗ್ರೆಸ್ ನೂತನ ಎಂಎಲ್​ಸಿ ಮಂಜುನಾಥ್ ಭಂಡಾರಿ: ಮಧು ಬಂಗಾರಪ್ಪ ಸೇರಿ ಹಲವರಿಗೆ ಅಚ್ಚರಿ

ಇದನ್ನೂ ಓದಿ:
ನಿಷೇಧಿತ ಕ್ಯಾಟ್ ಫಿಶ್​ ಸಾಕಾಣಿಕೆಗೆ ಅಡ್ಡೆಯಾದ ಬೀದರ್​; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 1 minute ago