Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Red Meat: ಕೆಂಪು ಮಾಂಸವನ್ನು ಹೆಚ್ಚು ಸೇವಿಸುತ್ತೀರಾ? ಈ ಸಮಸ್ಯೆಗಳು ಕಾಡಬಹುದು ಎಚ್ಚರ | Eating too much of red meat cause to several health problems here is the details

New-Project-2022-03-04T095111.054.jpg


Red Meat: ಕೆಂಪು ಮಾಂಸವನ್ನು ಹೆಚ್ಚು ಸೇವಿಸುತ್ತೀರಾ? ಈ ಸಮಸ್ಯೆಗಳು ಕಾಡಬಹುದು ಎಚ್ಚರ

ಕೆಂಪು ಮಾಂಸ (ಪ್ರಾತಿನಿಧಿಕ ಚಿತ್ರ)

ಬಾಯಿಗೆ ರುಚಿ ನೀಡುವ ಕೆಲವು ಆಹಾರ (Food) ಗಳು ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅಂತಹವುಗಳಲ್ಲಿ ರೆಡ್​ ಮೀಟ್ (Red Meat)​ ಕೂಡ ಒಂದು. ರೆಡ್​ ಮೀಟ್​ ಅನ್ನು ಕುರಿ, ಜಿಂಕೆ, ಹಂದಿ, ಮೇಕೆ ಸೇರಿದಂತೆ ಕೆಲವೇ ಕೆಲವು ಪ್ರಾಣಿಗಳಿಂದ ಪಡೆಯುತ್ತಾರೆ. ಮಸಾಲೆಯುಕ್ತ ಈ ಮಾಂಸಗಳ ಖಾದ್ಯಗಳು ಬಾಯಿಗೆ ಹೆಚ್ಚು ರುಚಿ ನೀಡುತ್ತವೆ. ಆದರೆ ದೇಹದಲ್ಲಿ ಅತಿಯಾದ ಕೊಬ್ಬು ಸಂಗ್ರವಾಗುವಂತೆ ಮಾಡುತ್ತದೆ. ಜತೆಗೆ ರಕ್ತದ ಚಲನೆಯಲ್ಲಿ ಏರುಪೇರು ಮಾಡುತ್ತದೆ. ಅದರಲ್ಲೂ ಅತಿಯಾದ ರೆಡ್​ ಮಿಟ್​ ಸೇವನೆ ದೇಹಕ್ಕೆ ಸಾಕಷ್ಟು ಹಾನಿಯುಂಟು ಮಾಡುತ್ತದೆ. ಕೆಂಪು ಮಾಂಸವನ್ನು ಅತಿಯಾಗಿ ಸೇವಿಸಿದರೆ ಹೃದಾಯಾಘಾತಕ್ಕೆ ಕಾರಣವಾಗುತ್ತದೆ ಎಂದು ಈ ಹಿಂದೆ ಅಧ್ಯಯನವೊಂದು ಸಾಬೀತುಪಡಿಸಿತ್ತು. ಹೀಗಾಗಿ ಕೆಂಪು ಮಾಂಸದ ಸೇವನೆ ಕಡಿಮೆ ಇದ್ದರೆ ದೇಹಕ್ಕೂ ಹಿತ. ಹಾಗಾದರೆ ಕೆಂಪು ಮಾಂಸದ ಸೇವನೆಯಿಂದ ಯಾವೆಲ್ಲಾ ಅಪಾಯಗಳಿವೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ,

ಅತಿಯಾದ ತೂಕ :
ಕೆಂಪು ಮಾಂಸದಲ್ಲಿರುವ ಲಿಪಿಡ್​ ಅಂಶಗಳು ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಗೊಳ್ಳುವಂತೆ ಮಾಡುತ್ತದೆ. ಇದರಿಂದ ಬೊಜ್ಜು ಬೆಳೆಯುತ್ತದೆ. ಇದರಿಂದ ದೇಹದಲ್ಲಿ ತೂಕ ಹೆಚ್ಚಲು ಕಾರಣವಾಗುತ್ತದೆ. ಸೊಂಟದ ಭಾಗದಲ್ಲಿ ಬೊಜ್ಜು ಬೆಳೆಯುವುದು, ತೂಳುಗಳಲ್ಲಿ ಅನಗತ್ಯ ಕೊಬ್ಬು ತುಂಬಿಕೊಂಡು ಸಮಸ್ಯೆಯನ್ನು ಉಲ್ಬಣಿಸುತ್ತದೆ.

ದೇಹದಿಂದ ಕೆಟ್ಟ ವಾಸನೆ:
ಕೆಂಪು ಮಾಂಸ ಸೇವನೆಯಿಂದ ದೇಹದಲ್ಲಿ ಕೆಟ್ಟ ವಾಸನೆ ಉತ್ಪತ್ತಿಯಾಗುವಂತೆ ಮಾಡುತ್ತದೆ. ನೆನಪಿಡಿ ನಾವು ಸೇವಿಸುವ ಆಹಾರದಿಂದ ನಮ್ಮ ದೇಹದಲ್ಲಿ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗುತ್ತದೆ. ಇದರಿಂದ ದೇಹದಿಂದ ಹೊರಸೂಸುವ ವಾಸನೆ ಕೂಡ  ಬದಲಾಗುತ್ತದೆ. ಕೆಂಪು ಮಾಂಸವನ್ನು ಅತಿಯಾಗಿ ಸೇವಿಸಿದರೆ ದೇಹ ಕೆಟ್ಟ ವಾಸನೆಯನ್ನು ಹೊರಸೂಸುತ್ತದೆ ಎನ್ನುತ್ತಾರೆ ತಜ್ಞರು.

ಕೊಲೆಸ್ಟ್ರಾಲ್​ ಅಸಮತೋಲನ:
ಕೆಂಪು ಮಾಂಸ ಅನಾರೋಗ್ಯಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್​ ಅನ್ನು ಹೊಂದಿದೆ. ಹೀಗಾಗಿ ಕೆಂಪು ಮಾಂಸದ ಅತಿಯಾದ ಸೇವನೆ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ಏರುಪೇರು ಮಾಡಿ, ಹೃದಯಕ್ಕೂ ಹಾನಿಯುಂಟು ಮಾಡುತ್ತದೆ. ಹೀಗಾಗಿ ಕೆಂಪು ಮಾಂಸದ ಬದಲು ದೇಹಕ್ಕೆ ಹಾನಿ ಮಾಡದ ಮಾಂಸಗಳನ್ನು ರುಚಿಗಾಗಿ ತಿನ್ನಬಹುದು ಎನ್ನುವುದು ತಜ್ಞರ ಮಾತು.

ಕೆಟ್ಟ ಉಸಿರು:
ಕೆಂಪು ಮಾಂಸದ ಸೇವನೆಯಿಂದ ದೇಹದಲ್ಲಿ ಒಂದಷ್ಟು ರಾಸಾಯನಿಕ ಉತ್ಪತ್ತಿಯಾಗಿ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್​ಗೆ ಕಾರಣವಾಗುತ್ತದೆ. ಇದರಿಂದ ಕೆಟ್ಟವಾಸನೆಯ ಗಾಳಿ ದೇಹದಿಂದ ಹೊರಬರುವಂತೆ ಮಾಡುತ್ತದೆ. ಹೀಗಾಗಿ ಕೆಂಪು ಮಾಂಸದ ಸೇವನೆ ಕಡಿಮೆ ಇದಷ್ಟೂ ಒಳ್ಳೆಯದು.

ಜೀರ್ಣಕ್ರಿಯೆಗೆ ಸಮಸ್ಯೆ:
ದೇಹದಲ್ಲಿ ಜೀರ್ಣಕ್ರಿಯೆ ಅತಿ ಮುಖ್ಯವಾಗಿದ್ದು. ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದರೆ ಅದರಿಂದ ಉಂಟಾಗುವ ಸಮಸ್ಯೆ ಒಂದೆರಡಲ್ಲ. ಕೆಂಪು ಮಾಂಸ ಕೂಡ ಜೀರ್ಣಕ್ರಿಯೆಗೆ ಸಮಸ್ಯೆ ಉಂಟುಮಾಡುತ್ತದೆ. ಹೆಚ್ಚಿನ ಕೊಬ್ಬನ್ನು ಹೊಂದಿರುವುದರಿಂದ ಸುಲಭವಾಗಿ ಜೀರ್ಣವಾಗದೆ ಹೊಟ್ಟೆಯಲ್ಲೇ ಕುಳಿತು ಅಜೀರ್ಣ, ಮಲಬದ್ಧತೆಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ:

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದಾಗುವ ಲಾಭಗಳೇನು? ತಿಳಿದುಕೊಳ್ಳಿ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,591,112
Recovered
0
Deaths
528,655
Last updated: 6 minutes ago