Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಶ್ಲೋಕ, ಮಂತ್ರ ಹೇಳುವವರ ಮೇಲೆ ಅದರ ಪರಿಣಾಮ ಅಪಾರ, ಅನುಚಿತವಾಗಿ ಪಠಿಸುವವರಿಗೆ ಅಪಾಯಕಾರಿಯೂ ಹೌದು! | Slokas and mantras in hindu mythology know its significance in kannada

sloka.jpg


ಶ್ಲೋಕ, ಮಂತ್ರ ಹೇಳುವವರ ಮೇಲೆ ಅದರ ಪರಿಣಾಮ ಅಪಾರ, ಅನುಚಿತವಾಗಿ ಪಠಿಸುವವರಿಗೆ ಅಪಾಯಕಾರಿಯೂ ಹೌದು!

ಶ್ಲೋಕ ಮತ್ತು ಮಂತ್ರ ಸರಿಯಾಗಿ ಪಠಿಸುವವ ಮೇಲೆ ಪರಿಣಾಮ ಅಗಾಧ- ಅಪಾರ! ಅನುಚಿತವಾಗಿ ಜಪ ಮಾಡುವವರಿಗೆ ಅಪಾಯಕಾರಿಯೂ ಹೌದು!

ಶ್ಲೋಕ ಅಂದರೆ (sloka significance) ಅರ್ಥ ಮತ್ತು ವ್ಯಾಖ್ಯಾನಭರಿತ ಛಂದೋಬದ್ಧ, ವ್ಯಾಕರಣಯುಕ್ತ ಪದ ಪಂಕ್ತಿ! ಪದ್ಯದ ರೂಪದಲ್ಲಿದ್ದು ಒಂದು ಜೋಡಿ ಅನುಕ್ರಮ ಸಾಲುಗಳು, ಸಾಮಾನ್ಯವಾಗಿ ಪ್ರಾಸಬದ್ಧವಾಗಿದ್ದು ಒಂದೇ ಉದ್ದ ಹೊಂದಿರುತ್ತವೆ. ಹೆಚ್ಚಿನ ಹಿಂದೂ ಧರ್ಮಗ್ರಂಥಗಳನ್ನು ಶ್ಲೋಕಗಳ ರೂಪದಲ್ಲಿ ಬರೆಯಲಾಗಿದೆ. ಉದಾಹರಣೆಗೆ: ಮಹಾಭಾರತ, ರಾಮಾಯಣ ,ಭಗವದ್ಗೀತೆ ಮತ್ತು ಉಪನಿಷತ್ತುಗಳು ಇತ್ಯಾದಿ. ಮಂತ್ರ ಅಂದರೆ (mantra significance) ಗುಣಿತಾಕ್ಷರಯುಕ್ತವಾದ ಬೀಜಾಕ್ಷರಗಳು ಮತ್ತು ಬೀಜಾಕ್ಷರಗಳ ಪದ ಪಂಕ್ತಿಯೇ ಮಂತ್ರ! ಮಂತ್ರ ಎಂದರೆ ಉದ್ದವಾದ ಪಠ್ಯ ಅಥವಾ ಪದ್ಯವಲ್ಲ. ಬಹಳ ಚಿಕ್ಕ ಪಠ್ಯ. ಆದರೆ, ಅದರ ಪ್ರಭಾವ ಹೆಚ್ಚು. ಇದು ಅರ್ಥವನ್ನು ಬಹಳ ಪರಿಣಾಮಕಾರಿಯಾಗಿ ತಿಳಿಸುತ್ತದೆ (hindu mythology).

ಮಂತ್ರಗಳು ಬೀಜಾಕ್ಷರಗಳು ಮತ್ತು ಧ್ವನಿಯ ಶಕ್ತಿಯನ್ನು ಸಂಯೋಜಿಸುತ್ತವೆ. ಸೂಕ್ತವಾದ ಸ್ವರ, ಆವರ್ತನ, ಲಯ ಮತ್ತು ಪ್ರಮಾಣದಲ್ಲಿ ಇವುಗಳನ್ನು ಉಚ್ಛರಿಸಬೇಕು, ಪಠಿಸಬೇಕು. ಇಲ್ಲದಿದ್ದರೆ, ಅದರ ಸಂಪೂರ್ಣ ಪರಿಣಾಮ ಉಂಟಾಗುವುದಿಲ್ಲ. ಮಂತ್ರಗಳು ಬಹಳ ಚಿಕ್ಕದಾಗಿರುತ್ತವೆ. ಕೆಲವೇ ಪದಗಳಲ್ಲಿ, ಮಂತ್ರವು ಬಹಳಷ್ಟು ಅರ್ಥವನ್ನು ನೀಡುತ್ತದೆ.

ಪವಿತ್ರವಾದ ‘ಓಂ’ ಉಚ್ಛಾರಣೆಯಿಂದ ಆರಂಭವಾಗುವ ಪದಗಳ ಗುಂಪು, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿದೆ. ಮಂತ್ರಗಳು ಬ್ರಹ್ಮಾಂಡದ ಚೈತನ್ಯ ಶಕ್ತಿಯೊಂದಿಗೆ ಪ್ರತಿಧ್ವನಿಸುತ್ತವೆ. ಪಠಿಸುವಾಗ ಕೆಲವು ನಿರ್ದಿಷ್ಟ ಧ್ವನಿ ತರಂಗಗಳು ಹೊರಹೊಮ್ಮಿ ಶರೀರ ಮತ್ತು ಮನಸ್ಸಿನ ಮೇಲೆ ಅಗಾಧವಾದ ಧನಾತ್ಮಕ ಪರಿಣಾಮಗಳನ್ನು ಉಂಟುಮಾಡುವಂತೆ ಮಂತ್ರಗಳನ್ನು ರಚಿಸಲಾಗಿದೆ. ಆದ್ದರಿಂದ ಅವುಗಳನ್ನು ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ.

ಮಂತ್ರಗಳು ಆತ್ಮಕ್ಕೆ ಔಷಧವಿದ್ದಂತೆ. ನಮ್ಮ ಪೂರ್ವಜರು ಯಜ್ಞಗಳನ್ನು ಮಾಡುವಾಗ ಅಥವಾ ತಪಸ್ಸನ್ನು ಮಾಡುವಾಗ, ದೇವರನ್ನು ಮೆಚ್ಚಿಸಲು ಮತ್ತು ತಮ್ಮ ವಿವಿಧ ಇಷ್ಟಾರ್ಥಗಳನ್ನು ಪೂರೈಸಲು ವಿವಿಧ ಮಂತ್ರಗಳನ್ನು ಪಠಿಸುತ್ತಿದ್ದರು.

ಮಂತ್ರವು ಏಕಾಗ್ರತೆಗೆ ಸಹಾಯಕವಾಗುತ್ತದೆ. ನೀವು ಯಾವುದೇ ಮಂತ್ರವನ್ನು ಪಠಿಸಿದಾಗ ನೀವು ಧನಾತ್ಮಕ ಕಂಪನಗಳನ್ನು, ಶಕ್ತಿಯನ್ನು ಅನುಭವಿಸಬಹುದು. ಪ್ರತಿಯೊಂದು ಮಂತ್ರವು ಅದ್ಭುತ ಶಕ್ತಿಯನ್ನು ಹೊಂದಿದೆ. ಮಂತ್ರಗಳು ಅನುಕೂಲಕರ ಫಲಿತಾಂಶಗಳನ್ನು ಹೊಂದಿವೆ ಮತ್ತು ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.

ಮಂತ್ರಗಳು ಒಂದು ಆವಾಹನೆಯಾಗಿದೆ. ಅದನ್ನು ಪಠಿಸುವ ವ್ಯಕ್ತಿ ಮತ್ತು ಅದನ್ನು ಕೇಳುವವರಲ್ಲಿ ಶಕ್ತಿಯನ್ನು ಪ್ರಚೋದಿಸುವ ಶಬ್ದಗಳ ಗುಂಪಾಗಿದೆ. ತರಬೇತಿ ಪಡೆದ ಗುರುಗಳ ಬಳಿ ಔಪಚಾರಿಕ ಕಲಿಕೆಯ ನಂತರ ಮಾತ್ರ ಮಂತ್ರಗಳನ್ನು ಪಠಿಸಬಹುದು. ಸರಿಯಾಗಿ ಪಠಿಸುವವರಿಗೆ ಅಗಾಧವಾದ ಪರಿಣಾಮ ಉಂಟಾಗುತ್ತದೆ. ಇಲ್ಲದಿದ್ದರೆ ತಪ್ಪಾಗಿ ಉಚ್ಛರಿಸುವ, ಅನುಚಿತವಾಗಿ ಜಪ ಮಾಡುವವರಿಗೆ ಅಷ್ಟೇ ಅಪಾಯಕಾರಿಯೂ ಹೌದು.

ಮಂತ್ರಗಳು ನಿಮ್ಮ ಕೆಟ್ಟ ಕೆಲಸಗಳ ಪ್ರಭಾವ ತೊಡೆದುಹಾಕಲು ಸಹಾಯ ಮಾಡುತ್ತವೆ ಮತ್ತು ಮಾತಿನ ಶುದ್ಧೀಕರಣಕ್ಕೆ ಸಹಾಯ ಮಾಡುತ್ತವೆ. ನೀವು ಧರ್ಮದ ಪ್ರಕಾರ ಬದುಕಲು ಪ್ರಾರಂಭಿಸುತ್ತೀರಿ ಮತ್ತು ಖಚಿತವಾಗಿ ನೀವು ಹೊಲಸು ಭಾಷೆಯನ್ನು ಬಳಸುವುದನ್ನು ನಿಲ್ಲಿಸುತ್ತೀರಿ. ನಿಮಗೆ ಯಾವುದೇ ಮಂತ್ರವನ್ನು ಪಠಿಸಲು ಸಾಧ್ಯವಾಗದಿದ್ದರೆ ನೀವು ಭಕ್ತಿ ಪ್ರೇಮದಿಂದ ಯಾವುದೇ ದೇವರ ನಾಮಸ್ಮರಣೆ ಮಾಡಿದರೂ ಸಾಕು.

ಸಾಮ-ವೇದದ ಪ್ರಕಾರ ಮಂತ್ರಗಳ ಪಠಣವು ನಿಮ್ಮ ಶರೀರದಲ್ಲಿರುವ ಚಕ್ರಗಳನ್ನು ಸಕ್ರಿಯಗೊಳಿಸುತ್ತದೆ, ಅದರಿಂದ ನಿಮ್ಮನ್ನು ಜ್ಞಾನೋದಯದ ಹಾದಿಗೆ ಕರೆದೊಯ್ಯುತ್ತದೆ ಎಂದು ನಂಬಲಾಗಿದೆ. ಮಂತ್ರಗಳನ್ನು ಕೇಳುವ ಜನರು ಸಹ ಚಕ್ರಗಳ ಸುತ್ತಲೂ ತಾಪಮಾನ ಹೆಚ್ಚಾಗುವುದನ್ನು ಗಮನಿಸಿದ್ದಾರೆ. ಉದಾಹರಣೆಗೆ: ಮಹಾ ಮೃತ್ಯುಂಜಯ ಮಂತ್ರ, ಗಾಯತ್ರಿ ಮಂತ್ರ ಇತ್ಯಾದಿ.

ಸ್ತ್ರೋತ್ರ: ಅಲಂಕಾರಯುಕ್ತವಾದ, ಅರ್ಥವಿಶೇಷಣವುಳ್ಳ ಪದಗಳ ಪಂಕ್ತಿಯೇ ಸ್ತೋತ್ರ!! ಅವು ದೇವರನ್ನು, ನಮ್ಮ ಇಷ್ಟ ದೈವವನ್ನು ಸ್ತುತಿಸುವುದಕ್ಕಾಗಿ ಬರೆದ ಸ್ತೋತ್ರಗಳು. ಸೂಕ್ತಂ ಮತ್ತು ಸ್ತೋತ್ರ ಎರಡೂ ದೇವರನ್ನು ಪ್ರಾರ್ಥಿಸುವ ಒಂದೇ ಉದ್ದೇಶವನ್ನು ಹೊಂದಿವೆ. ಅಷ್ಟೋತ್ತರ ಸ್ತೋತ್ರಂಗಳು, ಸಹಸ್ರನಾಮಂಗಳೆಲ್ಲವೂ ದೇವರ ಸ್ತುತಿಗಾಗಿ ಮತ್ತು ಸರ್ವಶಕ್ತ ದೇವರನ್ನು ಸಂಪರ್ಕಿಸುವ ಮಾರ್ಗವಾಗಿವೆ. ಉದಾಹರಣೆಗೆ: ವಿಷ್ಣು ಸಹಸ್ರನಾಮ ಸ್ತೋತ್ರ, ಶಿವ ಸಹಸ್ರನಾಮ ಸ್ತೋತ್ರ.

ಅಗ್ರಗಣ್ಯವಾಗಿ ನೀವು ಶ್ಲೋಕ, ಮಂತ್ರ ಅಥವಾ ಸ್ತೋತ್ರದಲ್ಲಿ ನಂಬಿಕೆ ಹೊಂದಿರಬೇಕು. ಅವುಗಳನ್ನು ವ್ಯಾಕರಣ ಶುದ್ಧತೆಯಿಂದ ಸಂಪೂರ್ಣವಾಗಿ ಉಚ್ಚರಿಸಬೇಕು. ನೀವು ಅವುಗಳನ್ನು ನಿಮ್ಮ ಚಿತ್ತದಲ್ಲಿ (ಆತ್ಮ) ಅನುಭವಿಸಬೇಕು, ನಂತರ ಶ್ಲೋಕಗಳು, ಮಂತ್ರಗಳು, ಸ್ತೋತ್ರಗಳು ನಿಮ್ಮಲ್ಲಿ ಅದ್ಭುತ ಪರಿಣಾಮಗಳನ್ನು ಉಂಟುಮಾಡುತ್ತವೆ. ಶ್ಲೋಕಗಳು, ಮಂತ್ರಗಳು, ಸ್ತೋತ್ರಂಗಳನ್ನು ಪಠಿಸುವ ಮೂಲಕ ನೀವು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಹೊಂದುವಿರಿ. ನೀವು ಜ್ಞಾನೋದಯ, ಸಾಕ್ಷಾತ್ಕಾರದ ಸನ್ಮಾರ್ಗದಲ್ಲಿರುತ್ತೀರಿ.

ನೀವು ಶಿವೋಹಂ = ಶಿವ + ಅಹಮ್ ( ನಾನು ) ಅನ್ನು ಜಪಿಸಿದಾಗ ನಾನು ಶಿವ, ಆದ್ದರಿಂದಲೇ ಮಂತ್ರವು “ಚಿದಾನಂದ ರೂಪಃ ಶಿವೋಹಂ ಶಿವೋಹಂ” ಎಂದಾಗುತ್ತದೆ. ನೀವು ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸಿದಾಗ, ನೀವು ದೀರ್ಘ ಮತ್ತು ಶಾಂತಿಯುತ ಜೀವನವನ್ನು ಹೊಂದುತ್ತೀರಿ (ಮೃತ್ಯುವನ್ನು ಜಯಿಸುವ ಮಂತ್ರ). ನೀವು ಓಂ ಎಂದು ಜಪಿಸಿದಾಗ, ನೀವು ಬ್ರಹ್ಮಾಂಡದ (ಕಾಸ್ಮಿಕ್) ಶಕ್ತಿಯನ್ನು ಅನುಭವಿಸಬಹುದು.

ನೀವು ಪಠಿಸಲು ಪ್ರಾರಂಭಿಸಿದಾಗ, ನೀವು ಮಂತ್ರಗಳ ಸೌಂದರ್ಯ ಮತ್ತು ವರ್ಚಸ್ಸನ್ನು ಅನುಭವಿಸುವಿರಿ. ಪಂಚಾಕ್ಷರಿ ಮಂತ್ರವಾದ “ನಮಃ ಶಿವಾಯ” ದಂತಹ ಯಾವುದೇ ಮಂತ್ರವನ್ನು ಜಪಿಸಲು ಪ್ರಾರಂಭಿಸಿ, ನೀವು ಧನಾತ್ಮಕ ಕಂಪನಗಳನ್ನು ಅನುಭವಿಸಬಹುದು. ಯಾವುದನ್ನಾದರೂ ಸರಿಯಾಗಿ ತಿಳಿದುಕೊಳ್ಳಲು, ನೀವು ಅದನ್ನು ಮೊದಲು ಅನುಭವಿಸಬೇಕು. ಶ್ಲೋಕಗಳು, ಮಂತ್ರಗಳು, ಸ್ತೋತ್ರಗಳು ಇದಕ್ಕೆ ಹೊರತಾಗಿಲ್ಲ.

ಮಹಾಮೃತ್ಯುಂಜಯ ಮಂತ್ರ ಮತ್ತು ಪಂಚಾಕ್ಷರಿ ಮಂತ್ರವಾದ ನಮಃ ಶಿವಾಯ ಪಠಿಸುವುದರಿಂದ ತಮ್ಮ ಕರ್ಮವನ್ನು ಜಯಿಸಬಲ್ಲ ಶಿವನ ಮಹಾನ್ ಭಕ್ತರಾದ ಭಕ್ತ ಮಾರ್ಕಾಂಡೇಯ ಮತ್ತು ಸತಿ ಸಾವಿತ್ರಿ ನಮಗೆ ಉದಾಹರಣೆಗಳನ್ನು ನೀಡಿದ್ದಾರೆ. ವಾಲ್ಮೀಕಿಯಂತಹ ಡಕಾಯಿತ ಕೂಡ ರಾಮನ ನಾಮವನ್ನು ಜಪಿಸುವುದರ ಮೂಲಕ ಶ್ರೇಷ್ಠ ಕವಿಯಾಗಿ ರೂಪಾಂತರಗೊಂಡನು ಮತ್ತು ರಾಮಾಯಣ ಬರೆದನು. ಇನ್ನು, ಪಾರ್ವತಿ ದೇವಿಯು ವರ್ಷಗಳ ಕಾಲ ತಪಸ್ಸು ಮಾಡಿದಳು ಮತ್ತು ಶಿವನಾಮವನ್ನು ಜಪಿಸಿ ಶಿವನನ್ನು ಪತಿಯಾಗಿ ಪಡೆದಳು.

ವಿವಿಧ ಸ್ತೋತ್ರಗಳು ಮತ್ತು ಅಷ್ಟಕಂಗಳು:
ವೈದ್ಯನಾಥ ಅಷ್ಟಕಮ್ – ಇದು ಉತ್ತಮ ಆರೋಗ್ಯಕ್ಕಾಗಿ ಪಠಿಸಲ್ಪಡುತ್ತದೆ, ಏಕೆಂದರೆ ಶಿವ ವೈದ್ಯನಾಥ, ಆರೋಗ್ಯಕ್ಕಾಗಿ ದೇವರು.
ಲಿಂಗಾಷ್ಟಕಂ-ಲಿಂಗ ಪೂಜೆ ಮಾಡುವ ಪುಣ್ಯವನ್ನು ಹೇಳುತ್ತದೆ.
ಕಾಲಭೈರವ ಅಷ್ಟಕಮ್-ಅಹಂಕಾರ, ಕಾಮ, ಕ್ರೋಧ, ದ್ವೇಷ ಮತ್ತು ಎಲ್ಲಾ ನಕಾರಾತ್ಮಕತೆಗಳಿಂದ ನಮ್ಮನ್ನು ಮುಕ್ತಗೊಳಿಸಲು ಇದನ್ನು ಪಠಿಸಲಾಗುತ್ತದೆ.
ಶಿವಾಷ್ಟಕಂ-ಶಿವನ ಶ್ರೇಷ್ಠತೆಯನ್ನು ವಿವರಿಸುತ್ತದೆ.
ಬಿಲ್ವಾಷ್ಟಕಮ್ -ಇದು ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ನಮಗೆ ಸಿಗುವ ಪುಣ್ಯವನ್ನು ತಿಳಿಸುತ್ತದೆ.
ರುದ್ರಾಷ್ಟಕಂ -ಇದು ರುದ್ರನ ಸ್ತುತಿಯಾಗಿದೆ.
ಶಿವ ತಾಂಡವ ಸ್ತೋತ್ರಮ್ (ಪ್ರತಿದಿನ ಜಪಿಸುವ ಮೂಲಕ ಅದು ನಮಗೆ ಸಾಕಷ್ಟು ಸಕಾರಾತ್ಮಕತೆ, ಅಪಾರ ಶಕ್ತಿ ಮತ್ತು ಶಕ್ತಿಯನ್ನು ನೀಡುತ್ತದೆ.
ಚಂದ್ರಶೇಖರ ಅಷ್ಟಕಂ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ (ಬರಹದ ಮೂಲ: ಸದ್ವಿಚಾರ ತರಂಗಿಣಿ)

Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 2 minutes ago