Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ನಟನಾಗಿ ಗುರುತಿಸಿಕೊಳ್ಳುತ್ತಿರುವ ಐಎಎಸ್ ಅಧಿಕಾರಿ; ಸಣ್ಣ ಹಳ್ಳಿಯಿಂದ ಆಗಮಿಸಿದ ಅವರ ಜೀವನ ಪಯಣ ಹೀಗಿದೆ ನೋಡಿ | Abhishek Singh life journey from small village to IAS officer and an actor

Abhishek-Singh.jpg


ನಟನಾಗಿ ಗುರುತಿಸಿಕೊಳ್ಳುತ್ತಿರುವ ಐಎಎಸ್ ಅಧಿಕಾರಿ; ಸಣ್ಣ ಹಳ್ಳಿಯಿಂದ ಆಗಮಿಸಿದ ಅವರ ಜೀವನ ಪಯಣ ಹೀಗಿದೆ ನೋಡಿ

ಅಭಿಷೇಕ್ ಸಿಂಗ್

ಚಿತ್ರರಂಗ ಇಂಥವರಿಗೆ ಎಂದು ಸೀಮಿತವಲ್ಲದಿದ್ದರೂ ಹೊಸಬರ ಪ್ರವೇಶ ಅಷ್ಟೇನು ಸುಲಭವಲ್ಲ. ಇದಕ್ಕೆ ಉದಾಹರಣೆಗಳು ಸಾಕಷ್ಟಿವೆ. ಒಂದುವೇಳೆ ಚಿತ್ರರಂಗ ಪ್ರವೇಶಿಸಿದರೂ ದೀರ್ಘಕಾಲ ಅಲ್ಲಿ ಉಳಿಯಲು ಅಪಾರ ಪರಿಶ್ರಮ, ಅನನ್ಯ ಪ್ರತಿಭೆ ಬೇಕು. ಬಾಲಿವುಡ್ ಚಿತ್ರರಂಗ ಕೂಡ ಇದಕ್ಕೆ ಹೊರತಲ್ಲ. ನೆಪೋಟಿಸಂ ಕುರಿತ ಆಪಾದನೆಗಳು ಚಿತ್ರರಂಗದ ಮೇಲೆ ಇದ್ದರೂ, ಹಲವು ಪ್ರತಿಭೆಗಳು ಸ್ವಂತ ಪರಿಶ್ರಮದಿಂದ ಗುರುತಿಸಿಕೊಂಡಿದ್ದಾರೆ. ಸ್ಟಾರ್​ ಕಿಡ್​ಗಳು ಚಿತ್ರರಂಗದಲ್ಲಿ ಯಶ ಕಾಣದೇ ಬೇರೆ ರಂಗದತ್ತ ತೆರಳಿರುವುದೂ ಇದೆ. ಆದರೆ ಬಾಲಿವುಡ್​ನಲ್ಲಿ (Bollywood) ನೆಲೆಯೂರಬೇಕು ಎಂದು ಕನಸು ಕಾಣುವವರಿಗೆ ಸ್ಫೂರ್ತಿ ತುಂಬಬಲ್ಲ ಓರ್ವ ಪ್ರತಿಭೆ ಇತ್ತೀಚೆಗೆ ದೊಡ್ಡ ಸದ್ದು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ಯಾವುದೇ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರಿ. ಪ್ರತಿಭೆಯಿದ್ದರೆ ನಟನೆಯಲ್ಲಿ ಗುರುತಿಸಿಕೊಳ್ಳಬಹುದು ಎಂದೂ ಆ ನಟ ಸಾಬೀತು ಮಾಡುತ್ತಿದ್ದಾರೆ. ಅವರು ಮತ್ಯಾರು ಅಲ್ಲ, ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ (Abhishek Singh)!

ಅಭಿಷೇಕ್ ಸಿಂಗ್ ಈ ಹಿಂದೆ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಕಾರ್ಯಶೈಲಿಯಿಂದ ಅಧಿಕಾರಿ ವಲಯದಲ್ಲಿ ಅವರು ಖ್ಯಾತರಾಗಿದ್ದರು. ಆದರೆ ನಟನೆಯ ಮೇಲೆ ಅವರಿಗೆ ತುಸು ಹೆಚ್ಚೇ ಇತ್ತು. ಇದೇ ಕಾರಣಕ್ಕೆ ಆಡಳಿತಾತ್ಮಕ ಸೇವೆಗಳನ್ನು ತೊರೆದು ನಟನೆಯಲ್ಲೇ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಖ್ಯಾತ ಸಂಗೀತಗಾರರಾದ ಬಾದ್‌ಶಾ, ಜುಬಿನ್ ನೌಟಿಯಾಲ್ ಮತ್ತು ಬಿ ಪ್ರಾಕ್ ಅವರ ಹಲವಾರು ಹಿಟ್ ಆಲ್ಬಂಗಳಲ್ಲಿ ಕಾಣಿಸಿಕೊಂಡ ಅಭಿಷೇಕ್ ಸಿಂಗ್ ಖ್ಯಾತಿ ಗಳಿಸಿದರು.

ಅಭಿಷೇಕ್ ಸಿಂಗ್ ಖಡಕ್ ಲುಕ್​ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಅವರು ಕಾಣಿಸಿಕೊಂಡಿರುವ ಮ್ಯೂಸಿಕ್ ಆಲ್ಬಂಗಳು ಅಪಾರ ವೀಕ್ಷಣೆ ಗಳಿಸಿವೆ. ತಮ್ಮ ನಟನಾ ಜರ್ನಿಯ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಅವರು ತಾವು ಸಣ್ಣ ಹಳ್ಳಿಯಿಂದ ಬಂದಿದ್ದನ್ನು ಹೇಳಿಕೊಂಡಿದ್ದಾರೆ. ‘‘ಸಣ್ಣ ಹಳ್ಳಿಯ ಮಧ್ಯಮ ವರ್ಗದ ಕುಟುಂಬದಿಂದ ಬಂದವನು ನಾನು. ಶ್ರದ್ಧೆಯಿಂದ ಓದಿ, ಕಠಿಣ ಪರಿಶ್ರಮದಿಂದ ಐಎಎಸ್ ಅಧಿಕಾರಿಯಾದೆ’’ ಎಂದು ಅವರು ಹೇಳಿದ್ದಾರೆ.

ಅಭಿಷೇಕ್ ಸಿಂಗ್:

ಅಭಿಷೇಕ್ ಕಾಣಿಸಿಕೊಂಡಿರುವ ಮ್ಯೂಸಿಕ್ ಆಲ್ಬಂ ಒಂದು ಇಲ್ಲಿದೆ:

ಆದರೆ ಅಭಿಷೇಕ್ ಕೇವಲ ಐಎಎಸ್​​ ಕಾರ್ಯಗಳಿಗೆ ಸೀಮಿತಗೊಳಿಸಿಕೊಂಡಿಲ್ಲ. ಬದಲಾಗಿ ಮನರಂಜನಾ ಕ್ಷೇತ್ರಕ್ಕೂ ಧುಮುಕಿದ್ದಾರೆ. ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದಲ್ಲದೇ ಅಭಿಷೇಕ್ ಮಾನವೀಯ ಕಾರ್ಯಗಳ ಮೂಲಕಲವೂ ಸುದ್ದಿಯಾಗುತ್ತಿದ್ದಾರೆ. 2020ರ ಕೊವಿಡ್ ಸಮಯದಲ್ಲಿ ಅವರ ಕಾರ್ಯಗಳು ಸಖತ್ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಷ್ಟದಲ್ಲಿರುವವರಿಗೆ ಕ್ಯಾಂಪೇನ್ ಮೂಲಕ ಅವರು ಸಹಾಯ ಮಾಡಿದ್ದರು.

ಸಾಧನೆಗೆ ನಮ್ಮ ಮನಸ್ಥಿತಿ ಅಡ್ಡಿಯಾಗಬಲ್ಲದೇ ಹೊರತು ಮತ್ತೇನೂ ಅಲ್ಲ ಎನ್ನುವುದು ಅಭಿಷೇಕ್ ಮಾತು. ಪ್ರಸ್ತುತ ನಟ ಸಾಮಾಜಿಕ ಕೆಲಸಗಳಲ್ಲಿ ನಟನೆಯಲ್ಲಿ ಬ್ಯುಸಿಯಾಗಿದ್ಧಾರೆ.

ಇದನ್ನೂ ಓದಿ:

Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ

ರಶ್ಮಿಕಾ ಹೇಗೆ ಯಾವಾಗಲೂ ಖುಷಿಯಾಗಿರುತ್ತಾರೆ? ಸಂತೋಷದ ರಹಸ್ಯವನ್ನು ರಿವೀಲ್ ಮಾಡಿದ ನಟಿ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,591,112
Recovered
0
Deaths
528,655
Last updated: 9 minutes ago