Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಕೇರಳದ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಕಾಲೇಜು ಯೂನಿಯನ್ ಚುನಾವಣೆಯಲ್ಲಿ ಗೆಲುವು | Hijab wearing girl from SFI Ayshath Mahsooma wins Kasaragod government college union Election

SFI.jpg


ಕೇರಳದ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಕಾಲೇಜು ಯೂನಿಯನ್ ಚುನಾವಣೆಯಲ್ಲಿ ಗೆಲುವು

ಆಯಷತ್ ಮಹಸೂಮಾ

ಕಾಸರಗೋಡು: ಮೊದಲ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿ ಕಾಸರಗೋಡಿನ ಸರ್ಕಾರಿ ಕಾಲೇಜಿಗೆ ಸೇರಿದಾಗ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ವಿದ್ಯಾರ್ಥಿ ಘಟಕವಾದ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್‌ಗೆ (MSF) ಸೇರುವಂತೆ ಆಯಷತ್ ಮಹಸೂಮಾ ಮೇಲೆ ಒತ್ತಡ ಹೇರಿತ್ತು. ಸಿಪಿಐ(ಎಂ) ನ ವಿದ್ಯಾರ್ಥಿ ಘಟಕ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಸಂಘಟನೆಯು ಮಹಸೂಮಾ ಅವರಂತಹ  ಮುಸಲ್ಮಾನರಿಗೆ ಸೂಕ್ತವಲ್ಲ ಎಂದು ಹೇಳಲಾಗಿತ್ತು. ಆದಾಗ್ಯೂ, ಮಹಸೂಮಾ ಎಸ್‌ಎಫ್‌ಐನ್ನೇ ಆಯ್ಕೆ ಮಾಡಿದರು. ಪ್ರಸ್ತುತ ಸಂಘಟನೆಯ ಜಂಟಿ ಕಾರ್ಯದರ್ಶಿಯಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಇದೀಗ ಕಾಲೇಜು ಯೂನಿಯನ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿ ಮತ್ತು ಗೆದ್ದಿದ್ದಾರೆ. ಕಾಸರಗೋಡು ಸರ್ಕಾರಿ ಕಾಲೇಜಿನ ಇತಿಹಾಸದಲ್ಲಿ ಎಸ್​​ಎಫ್ಐ ಸಂಘಟನೆಯಿಂದ ಈ ಹುದ್ದೆ ಅಲಂಕರಿಸಿದ ಮೊದಲ ಮುಸ್ಲಿಂ ಹುಡುಗಿ ಈಕೆ. ಪಕ್ಕದ ಕರ್ನಾಟಕದಲ್ಲಿ ಹಿಜಾಬ್ ಗಲಾಟೆ ನಡೆಯುತ್ತಿದ್ದರೆ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ಮಹಸೂಮಾ ಅವರ ವಿಜಯದ ಮೂಲಕ ರಾಜಕೀಯ ಹೇಳಿಕೆ ನೀಡಲು ಎಸ್‌ಎಫ್‌ಐಗೆ ಅವಕಾಶ ಸಿಕ್ಕಿದೆ. ಸೆಮಿಸ್ಟರ್ ಪರೀಕ್ಷೆಯ ಸಿದ್ಧತೆಗಳ ನಡುವೆ ನ್ಯೂಸ್ 9 ನೊಂದಿಗೆ ಮಾತನಾಡಿದ 21ರ ಹರೆಯದ ಮಹಸೂಮಾ ತಮ್ಮ ಕಾಲೇಜಿನಲ್ಲಿ ಎಸ್‌ಎಫ್‌ಐ ಘಟಕವು ಕರ್ನಾಟಕದಲ್ಲಿ ಹಿಜಾಬ್ ವಿಷಯದಲ್ಲಿ ಸಂತ್ರಸ್ತರಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಬೆಂಬಲಿಸಿ ಪ್ರತಿಭಟನೆಯನ್ನು ನಡೆಸಿದೆ ಎಂದು ಹೇಳಿದರು. ”ಕರ್ನಾಟಕದ ಗಡಿಗೆ ಹತ್ತಿರವಾಗಿರುವುದರಿಂದ ಅಲ್ಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಗೋಮಾಂಸ ಭಕ್ಷಣೆ ವಿವಾದವಾಗಲಿ, ಹಿಜಾಬ್ ಧರಿಸುವ ವಿವಾದವಾಗಲಿ, ಸಮಾಜದಲ್ಲಿ ಒಡಕು ಮೂಡಿಸಿ ಅಲ್ಪಸಂಖ್ಯಾತರನ್ನು ದೂರವಿಡುವುದೇ ಇದರ ಉದ್ದೇಶ. ಶಿಕ್ಷಣವನ್ನು ನೀಡುವುದು ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಿದೆ. ಅವರು ವ್ಯಕ್ತಿಗಳ ಹಕ್ಕುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಮಹಸೂಮಾ ಹೇಳಿದ್ದಾರೆ.

ಸಾಂಪ್ರದಾಯಿಕ ಕುಟುಂಬದಿಂದ ಬಂದ ಮಹಸೂಮಾ ಕ್ಯಾಂಪಸ್ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಪೋಷಕರ ವಿರೋಧವನ್ನು ಎದುರಿಸಿದ್ದರು. “ಎಸ್‌ಎಫ್‌ಐ ಜೊತೆ ಕೆಲಸ ಮಾಡಿದ ನನ್ನ ಹಿರಿಯ ಸಹೋದರರು ಬೆಂಬಲ ನೀಡಿದರು. ನಮ್ಮ ಕಾಲೇಜಿನಲ್ಲಿ ಮುಸ್ಲಿಂ ಹುಡುಗಿಯರ ದೊಡ್ಡ ವಿಭಾಗವಿದೆ. ಎಂಎಸ್‌ಎಫ್ ಮುಸ್ಲಿಮರು ತಮ್ಮ ಪಕ್ಷಕ್ಕೆ ಮಾತ್ರ ಸೇರಬೇಕು ಎಂದು ನಿರೂಪಣೆಯನ್ನು ರಚಿಸುತ್ತಿದ್ದರು. ಅವರು ಹುಡುಗಿಯರನ್ನು ಎಂಎಸ್‌ಎಫ್‌ಗೆ ಸೇರಿಸುವಂತೆ ಕುಟುಂಬಗಳಿಗೆ ಒತ್ತಡ ಹೇರುತ್ತಿದ್ದರು.

ಆದಾಗ್ಯೂ,ಎಸ್ಎಫ್ಐಯಿಂದ ನಾನು ಕಲಿತದ್ದು ಏನೆಂದರೆ ಅದು ನಿಮ್ಮ ಧಾರ್ಮಿಕ ನಂಬಿಕೆಗಳ ಮೇಲೆ ನಿಮ್ಮನ್ನು ಒತ್ತಾಯಿಸುವುದಿಲ್ಲ ಅಥವಾ ನಿರುತ್ಸಾಹಗೊಳಿಸುವುದಿಲ್ಲ. ಹಿಜಾಬ್ ಅನ್ನು ಬಳಸಬೇಕೆ ಅಥವಾ ಬೇಡವೇ ಎಂಬುದರಲ್ಲಿ ಅದು ನಮ್ಮ ಆಯ್ಕೆಗಳನ್ನು ಗೌರವಿಸುತ್ತದೆ. ಹಿಜಾಬ್ ಧರಿಸುವುದು ನನ್ನ ಆಯ್ಕೆ. ಮುಸ್ಲಿಂ ವಿದ್ಯಾರ್ಥಿನಿಗೆ ಅದು ಧರಿಸಲು ಇಷ್ಟವಿಲ್ಲದಿದ್ದರೆ, ಎಸ್‌ಎಫ್‌ಐ ಕೂಡ ಅವಳೊಂದಿಗೆ ನಿಲ್ಲುತ್ತದೆ. ಅವರ ಆಯ್ಕೆಗಳನ್ನು ನಾವು ಗೌರವಿಸುತ್ತೇವೆ ಎಂಬ ಸಂದೇಶವನ್ನು ಹರಡಲು ಇತರ ಮುಸ್ಲಿಂ ವಿದ್ಯಾರ್ಥಿಗಳಿಗೆ ತೋರಿಸಲು ನಾನು ಸ್ಪರ್ಧಿಸಲು ನಿರ್ಧರಿಸಿದೆ ”ಎಂದು ಅವರು ಹೇಳಿದರು.

ಎಸ್‌ಎಫ್‌ಐ ಮತ್ತು ಎಂಎಸ್‌ಎಫ್ ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ, ಕೇರಳ ಸ್ಟೂಡೆಂಟ್ಸ್ ಯೂನಿಯನ್ ಮತ್ತು ಎಬಿವಿಪಿಯ ವಿದ್ಯಾರ್ಥಿ ಘಟಕಗಳು ಸಹ ಕಾಲೇಜಿನಲ್ಲಿ ಸಕ್ರಿಯವಾಗಿವೆ. “ನಮ್ಮ ಕಾಲೇಜಿನಲ್ಲಿ ಎಬಿವಿಪಿ ಒಂದು ಪ್ರಮುಖ ಅಸ್ತಿತ್ವವಾಗಿತ್ತು. ಆದರೆ ಕಾಲಾನಂತರದಲ್ಲಿ ಅದರ ಮಹತ್ವವು ಮರೆಯಾಯಿತು” ಎಂದು ಮಹಸೂಮಾ ಹೇಳಿದರು

ಮಹಸೂಮಾ ಅವರು ನಾಲ್ಕು ಮಕ್ಕಳನ್ನು ಹೊಂದಿರುವ ಕುಟುಂಬದ ಕಿರಿಯ ಸದಸ್ಯರಾಗಿದ್ದಾರೆ. ಆಕೆಯ ತಂದೆ ಒಬ್ಬ ವಾಣಿಜ್ಯೋದ್ಯಮಿ ಮತ್ತು ತಾಯಿ, ಗೃಹಿಣಿ. ಬಿಕಾಂ ನಂತರ, ಮಹಸೂಮಾ ಅವರು ಆರ್ಥಿಕವಾಗಿ ಸ್ವತಂತ್ರರಾಗಲು ಮತ್ತು ಅದರೊಂದಿಗೆ ತನ್ನ ರಾಜಕೀಯ ಕೆಲಸಗಳನ್ನು ಮುಂದುವರಿಸಲು ವೃತ್ತಿಪರ ಕೋರ್ಸ್ ಅನ್ನು ಮುಂದುವರಿಸಲು ಯೋಚಿಸಿದ್ದಾರೆ.

ಇದನ್ನೂ ಓದಿಮಕ್ಕಳಿಗೆ ವಿಭಜನೆಯ ವಿಷ ಉಣಿಸಬೇಡಿ, ಪೂರ್ವಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು: ಹಿಜಾಬ್ ವಿವಾದ ಬಗ್ಗೆ ಸದ್ಗುರು ಹೇಳಿದ್ದೇನು?

Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 9 minutes ago