Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

‘ಯಾಕೆ ಬೆತ್ತಲೆಯಾಗಿ ತಿರುಗುತ್ತೀಯಾ’ ಅಂತ ಫ್ರೆಂಡ್ಸ್​ ಕೇಳಿದ್ರು, ಬಾಯ್​ಫ್ರೆಂಡ್​ ಬಿಟ್ಟುಹೋದ; ನಟಿ ನಿಯಾ ಬೇಸರದ ಕಥೆ

Nia-Sharma-1024x576.jpg


Nia Sharma

ಸೆಲೆಬ್ರಿಟಿ ಆಗುವುದು ಸುಲಭವಲ್ಲ. ಜನರಿಂದ ಅನೇಕ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿಜೀವನದ ಕಾರಣಕ್ಕಾಗಿ ಆತ್ಮೀಯರಿಂದಲೇ ನಿಂದನೆಗೆ ಒಳಗಾಗಬೇಕಾದ ಸಂದರ್ಭವೂ ಬರಬಹುದು. ಆ ಎಲ್ಲ ಘಟ್ಟಗಳನ್ನು ದಾಟಿಕೊಂಡು ಬಂದಿದ್ದಾರೆ ನಟಿ ನಿಯಾ ಶರ್ಮಾ. ಹಿಂದಿ ಕಿರುತೆರೆಯಲ್ಲಿ ಫೇಮಸ್​ ಆಗಿರುವ ನಿಯಾ ಶರ್ಮಾ (Nia Sharma) ಅವರು ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ತಮ್ಮ ಬಟ್ಟೆಯ ಕಾರಣದಿಂದ ಫ್ರೆಂಡ್ಸ್​ ಹೇಗೆಲ್ಲ ಲೇವಡಿ ಮಾಡುತ್ತಿದ್ದರು, ಮಾಜಿ ಬಾಯ್​ಫ್ರೆಂಡ್​ ಯಾವ ರೀತಿ ಕಿರಿಕಿರಿ ಮಾಡುತ್ತಿದ್ದ ಎಂಬುದನ್ನೆಲ್ಲ ಅವರು ವಿವರಿಸಿದ್ದಾರೆ.

ನಿಯಾ ಶರ್ಮಾ ಅವರ ಸೋಶಿಯಲ್​ ಮೀಡಿಯಾ ಖಾತೆಯನ್ನು ಗಮನಿಸಿದರೆ ಅವರ ಫ್ಯಾಷನ್​ ಸೆನ್ಸ್​ ಹೇಗಿದೆ ಎಂಬುದು ತಿಳಿಯುತ್ತದೆ. ಸಿಕ್ಕಾಪಟ್ಟೆ ಬೋಲ್ಡ್​ ಅವತಾರದಲ್ಲಿ ಅವರು ಗಮನ ಸೆಳೆಯುತ್ತಾರೆ. ಅದರಿಂದ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ 69 ಲಕ್ಷಕ್ಕೂ ಹೆಚ್ಚು ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಅವರ ಆಪ್ತ ಸ್ನೇಹಿತರಿಗೆ ನಿಯಾ ಧರಿಸುತ್ತಿದ್ದ ಬಟ್ಟೆಗಳ ಬಗ್ಗೆ ಅಸಮಾಧಾನ ಇತ್ತು.

ಅನೇಕ ಸಮಾರಂಭಗಳಿಗೆ ತೆರಳುವಾಗ ನಿಯಾ ಅವರು ಬೋಲ್ಡ್​ ಆಗಿ ಡ್ರೆಸ್​ ಮಾಡಿಕೊಂಡು ಹೋಗುತ್ತಿದ್ದರು. ಅದನ್ನು ಕಂಡು ಅವರ ಸ್ನೇಹಿತರೆಲ್ಲ ಲೇವಡಿ ಮಾಡಿದ್ದರು. ‘ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ನೀನು ಬೆತ್ತಲೆಯಾಗಿ ತಿರುಗಾಡುವುದು ಯಾಕೆ’ ಎಂದು ಸ್ನೇಹಿತರು ನೇರವಾಗಿಯೇ ಕೇಳಿದ್ದರು. ಆ ಮಾತಿನಿಂದ ನಿಯಾಗೆ ಸಖತ್​ ಬೇಸರ ಆಗಿತ್ತು. ಆ ಘಟನೆಯನ್ನು ನಿಯಾ ನೆನಪಿಸಿಕೊಂಡಿದ್ದಾರೆ.

ನಿಯಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಬೋಲ್ಡ್​ ಫೋಟೋಗಳನ್ನು ಪೋಸ್ಟ್​ ಮಾಡುತ್ತಾರೆ. ಅದರಿಂದ ಅವರ ಬಾಯ್​ಫ್ರೆಂಡ್​ಗೆ ಕಿರಿಕಿರಿ ಆಗುತ್ತಿತ್ತಂತೆ. ‘ನನ್ನ ಸೋಶಿಯಲ್​ ಮೀಡಿಯಾ ಇಮೇಜ್​ ಬಗ್ಗೆ ಅವರಿಗೆ ತಕರಾರು ಇತ್ತು. ಅದು ಯಾಕೆಂಬುದೇ ನನಗೆ ಅರ್ಥವಾಗಲಿಲ್ಲ. ನಿಜಜೀವನ ಬೇರೆ, ಸೋಶಿಯಲ್​ ಮೀಡಿಯಾ ಬೇರೆ. ಅದರಿಂದ ನಿಮ್ಮಿಬ್ಬರ ಸಂಬಂಧಕ್ಕೆ ಯಾಕೆ ತೊಂದರೆ ಆಗುತ್ತದೆ ಎಂಬುದು ನನ್ನ ಪ್ರಶ್ನೆ. ಸೋಶಿಯಲ್​ ಮೀಡಿಯಾನೇ ನಿಜವಾದ ಜೀವನ ಅಲ್ಲ. ಅದನ್ನು ಅಲ್ಲೇ ಬಿಟ್ಟುಬಿಡಬೇಕು’ ಎಂದು ನಿಯಾ ಶರ್ಮಾ ಹೇಳಿದ್ದಾರೆ.

2010ರಿಂದಲೂ ನಟನೆಯಲ್ಲಿ ಸಕ್ರಿಯವಾಗಿರುವ ನಿಯಾ ಶರ್ಮಾ ಅವರು ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ವೆಬ್​ ಸಿರೀಸ್​ಗಳಲ್ಲೂ ನಟಿಸಿದ್ದಾರೆ. ಅನೇಕ ಮ್ಯೂಸಿಕ್​ ವಿಡಿಯೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಮತ್ತೆ ಬೋಲ್ಡ್​ ಅವತಾರ ತಾಳಿದ ರಚಿತಾ ರಾಮ್​; ಪಡ್ಡೆ ಹುಡುಗರ ಮನಸ್ಸು ಕದ್ದ ರಚ್ಚು

Samantha: ‘ಪುಷ್ಪ’ ಐಟಮ್​ ಸಾಂಗ್​ನಲ್ಲಿ ಸಮಂತಾ ಹಾಟ್​ ಲುಕ್​ ನೋಡಿ ಫ್ಯಾನ್ಸ್​ ಫಿದಾSource link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 5 minutes ago