Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Covid 19 Karnataka Update: 402 ಮಂದಿಗೆ ಸೋಂಕು, 6 ಮಂದಿ ಸಾವು | Karnataka Coronavirus Numbers 402 Infected 6 Deaths due to Covid

coronavirus-6.jpg


Covid 19 Karnataka Update: 402 ಮಂದಿಗೆ ಸೋಂಕು, 6 ಮಂದಿ ಸಾವು

ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟದಲ್ಲಿ ಶುಕ್ರವಾರ 402 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 6 ಮಂದಿ ಸಾವನ್ನಪ್ಪಿದ್ದಾರೆ. 277 ಜನರು ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 6611 ಸಕ್ರಿಯ ಸೋಂಕು ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಶೇ 0.60 ಆಗಿದ್ದು, ಸೋಂಕಿತರ ಸಾವಿನ ಪ್ರಮಾಣ ಶೇ 1.49 ಇದೆ. ರಾಜ್ಯದಲ್ಲಿ ಈವರೆಗೆ 29,94,963 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,50,130 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 38,193 ಮಂದಿ ಸಾವನ್ನಪ್ಪಿದ್ದಾರೆ.

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನಲ್ಲಿ (ಎಸ್​ಡಿಎಂ) ಮತ್ತೆ 22 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಕಳೆದ 2 ದಿನಗಳಲ್ಲಿ 182 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ಒಟ್ಟು 204 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಉಳಿದವರ ತಪಾಸಣಾ ವರದಿಗಳು ಮಧ್ಯರಾತ್ರಿಯ ನಂತರ ಬರಲಿವೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ 224 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 129 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಬ್ಬರು ಸೋಂಕಿನಿಂದ ಮೃತಪಟಿದ್ದಾರೆ. ನಗರದಲ್ಲಿ ಪ್ರಸ್ತುತ 5235 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಈವರೆಗೆ 12,55,835 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,34,272 ಮಂದಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಧಾರವಾಡ 85, ದಕ್ಷಿಣ ಕನ್ನಡ 19, ಮೈಸೂರು 25, ಮಂಡ್ಯ, ಗದಗ, ಚಾಮರಾಜನಗರ, ಬಳ್ಳಾರಿ, ಬಾಗಲಕೋಟೆ 1, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 3, ಚಿತ್ರದುರ್ಗ 4, ಹಾಸನ, ಕೊಡಗು 2, ಕೋಲಾರ 3, ಶಿವಮೊಗ್ಗ, ಉಡುಪಿ 3, ತುಮಕೂರು, ಉತ್ತರ ಕನ್ನಡ, ಚಿಕ್ಕಮಗಳೂರು 5

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ರಾಯಚೂರು 1.

ಇದನ್ನೂ ಓದಿ: ಹೊಸ ತಳಿಯ ಕೊರೊನಾ ಪ್ರಕರಣ ಕಂಡುಬಂದ ಹಿನ್ನೆಲೆ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ
ಇದನ್ನೂ ಓದಿ: Coronavirus: ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,604,463
Recovered
0
Deaths
528,745
Last updated: 56 seconds ago