Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಜಾತಿ ಆಧಾರಿತ ಜನಗಣತಿ ನ್ಯಾಯಸಮ್ಮತ ಬೇಡಿಕೆ: ಎನ್‌ಸಿಬಿಸಿ ಮುಖ್ಯಸ್ಥ | Caste based census is a legitimate demand says NCBC chief Dr Bhagwan Lal Sahni

Sahni.jpg


ಜಾತಿ ಆಧಾರಿತ ಜನಗಣತಿ ನ್ಯಾಯಸಮ್ಮತ ಬೇಡಿಕೆ: ಎನ್‌ಸಿಬಿಸಿ ಮುಖ್ಯಸ್ಥ

ಡಾ ಭಗವಾನ್ ಲಾಲ್ ಸಾಹ್ನಿ

ಪಟನಾ: ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (NCBC) ಅಧ್ಯಕ್ಷ ಡಾ ಭಗವಾನ್ ಲಾಲ್ ಸಾಹ್ನಿ(Dr Bhagwan Lal Sahni) ಶುಕ್ರವಾರ ಜಾತಿ ಆಧಾರಿತ ಜನಗಣತಿ (Caste-based census) ನ್ಯಾಯಸಮ್ಮತ ಬೇಡಿಕೆಯಾಗಿದೆ. ಇದು ಉತ್ತಮ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಬೇಡಿಕೆಯೊಂದಿಗೆ ಹಲವಾರು ಸಂಘಟನೆಗಳು ತಮ್ಮನ್ನು ಭೇಟಿ ಮಾಡಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಸಾಹ್ನಿ ಹೇಳಿದ್ದಾರೆ. ಸರ್ಕಾರ ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಪಾಟ್ನಾದಲ್ಲಿ ಸುದ್ದಿಗಾರ ಜತೆ ಮಾತನಾಡಿದ ಸಾಹ್ನಿ ಹೇಳಿದರು. “ಜಾತಿ ಜನಗಣತಿಯು ನೀತಿ ನಿರೂಪಕರಿಗೆ ಹಿಂದುಳಿದ ಜಾತಿಗಳಿಗೆ ಉದ್ದೇಶಿತ ಕಲ್ಯಾಣ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಇದನ್ನು ಮಾಡಿದರೆ, ಯಾವ ಜಾತಿಗೆ ಎಷ್ಟು ಜನರು ಸೇರಿದ್ದಾರೆ ಮತ್ತು ಅವರಿಗೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ ”ಎಂದು ಸಾಹ್ನಿ ಹೇಳಿದರು. ಜಾತಿ ಆಧಾರಿತ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜೊತೆಗೆ ಇತರೆ ಹಿಂದುಳಿದ ವರ್ಗದ (OBC) ಜನರ ವಿವರಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಲವಾರು ರಾಜಕೀಯ ಪಕ್ಷಗಳು ದೇಶದ ಜನಸಂಖ್ಯೆಯ ಜಾತಿವಾರು ಎಣಿಕೆಗೆ ಒತ್ತಾಯಿಸಲು ಪ್ರಾರಂಭಿಸಿವೆ ಎಂದು ಸಾಹ್ನಿ ಹೇಳಿದರು.

ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಹಲವಾರು ರಾಜಕೀಯ ಪಕ್ಷಗಳು ಇಂತಹ ಜನಗಣತಿಗೆ ಬೇಡಿಕೆಯನ್ನು ಎತ್ತಿದ್ದವು.
ದೇಶದಲ್ಲಿ ಜಾತಿ ಆಧಾರಿತ ಜನಗಣತಿಯನ್ನು 1931 ರಲ್ಲಿ ನಡೆಸಲಾಗಿತ್ತು.

ಇದನ್ನೂ ಓದಿ: ಕೊವಿಡ್​​ನಿಂದ ಸಾವಿಗೀಡಾದವರ ಕುಟುಂಬಗಳಿಗೆ ₹ 50,000 ಪರಿಹಾರ ಧನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,591,112
Recovered
0
Deaths
528,655
Last updated: 8 minutes ago